ಕರ್ನಾಟಕ

karnataka

ETV Bharat / sports

ಅಭ್ಯಾಸ ಪಂದ್ಯದಲ್ಲೂ ರನ್​ ಗಳಿಕೆಗೆ ಪರದಾಟ​; ಶೂನ್ಯ ಸುತ್ತಿದ ಹಿಟ್​ಮ್ಯಾನ್​!

ಭಾರತ ಟೆಸ್ಟ್​​ ತಂಡಕ್ಕೆ ಆಯ್ಕೆಯಾದರೂ 11ರ ಬಳಗದಲ್ಲಿ ಆಡುವ ಅವಕಾಶ ಪಡೆಯುವಲ್ಲಿ ವಿಫಲರಾಗುತ್ತಿರುವ ರೋಹಿತ್​ ಶರ್ಮಾ ಅಭ್ಯಾಸ ಪಂದ್ಯದಲ್ಲೂ ಕೂಡ ರನ್ ಗಳಿಸಲಾಗದೆ ನಿರಾಸೆ ಅನುಭವಿಸಿದ್ದಾರೆ.

ರೋಹಿತ್​​ ಶರ್ಮಾ

By

Published : Sep 28, 2019, 1:10 PM IST

Updated : Sep 28, 2019, 3:23 PM IST

ವಿಜಯನಗರಂ:ಭಾರತ ಟೆಸ್ಟ್​​ ತಂಡಕ್ಕೆ ಆಯ್ಕೆಯಾದರೂ 11ರ ಬಳಗದಲ್ಲಿ ಆಡುವ ಅವಕಾಶ ಪಡೆಯುವಲ್ಲಿ ವಿಫಲರಾಗುತ್ತಿರುವ ರೋಹಿತ್​ ಶರ್ಮಾ ಅಭ್ಯಾಸ ಪಂದ್ಯದಲ್ಲೂ ಕೂಡ ರನ್ ಗಳಿಸಲಾಗದೆ ನಿರಾಸೆ ಅನುಭವಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ರೋಹಿತ್​ ಶೂನ್ಯಕ್ಕೆ ವಿಕೆಟ್​​ ಒಪ್ಪಿಸಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ಓಪನರ್​ ಆಗಿ ಹಿಟ್​ಮ್ಯಾನ್​ ಭರ್ಜರಿ ಸಕ್ಸಸ್​ ಕಂಡಿರುವುದು ಕ್ರಿಕೆಟ್​​ ಜಗತ್ತಿಗೆ ಗೊತ್ತು. ಆದರೆ ಟೆಸ್ಟ್​​ ತಂಡದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದ ಅವರು ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಆರಂಭಿಕರಾಗಿ ಕಣಕ್ಕಿಳಿಸುವಂತೆ ಕೆಲ ಮಾಜಿ ಆಟಗಾರರಿಂದ ಸಲಹೆಗಳು ಕೇಳಿಬಂದಿದ್ದವು. ಆದರೆ ಇದೀಗ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಅಧ್ಯಕ್ಷರ ಇಲೆವೆನ್​ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್​ ಎರಡು ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆ ಪೆವಿಲಿಯನ್​ ಸೇರಿಕೊಂಡರು. ಹೀಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದರು.

ಮೊದಲು ಬ್ಯಾಟಿಂಗ್​ ನಡೆಸಿದ ದ. ಆಫ್ರಿಕಾ ಮೊದಲ ಇನ್ನಿಂಗ್ಸ್​ನಲ್ಲಿ 64 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 279 ರನ್​ ಪೇರಿಸಿದೆ. ತಂಡದ ಪರ ನಾಯಕ ಅಡೆನ್​ ಮಾರ್ಕ್ರಮ್​ ಶತಕ ದಾಖಲಿಸಿದರು. ಈ ಮೊತ್ತಕ್ಕೆ ಉತ್ತರವಾಗಿ ಬ್ಯಾಟಿಂಗ್​ಗಳಿದ ಅಧ್ಯಕ್ಷರ ಇಲೆವೆನ್​ 11 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು 23 ರನ್​ ಗಳಿಸಿದೆ.

Last Updated : Sep 28, 2019, 3:23 PM IST

ABOUT THE AUTHOR

...view details