ನವದೆಹಲಿ :ಮುಂಬರುವ ವಿಶ್ವಕಪ್ಗಾಗಿ ಭಾರತ ತಂಡದ ಆಯ್ಕೆಏಪ್ರಿಲ್ 20 ಅಥವಾ ಅದಕ್ಕೂ ಮುನ್ನವೇ ನಡೆಯಲಿದೆ. ಮಹಾಸಮರಕ್ಕಾಗಿ ತಂಡದಲ್ಲಿ ಯಾರೆಲ್ಲ ಚಾನ್ಸ್ ಪಡೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಕ್ರೀಡಾಭಿಮಾನಿಗಳಲ್ಲಿ ಈಗಾಗಲೇ ಮನೆ ಮಾಡಿದೆ.
ರಿಷಭ್ ಪಂತ್ ವಿಶ್ವಕಪ್ ಆಡಲು ಸಮರ್ಥ, ಧೋನಿ ಜತೆ ಹೋಲಿಸಬೇಡಿ... 83 ವರ್ಲ್ಡ್‌ಕಪ್ ಹೀರೊ ಕಪಿಲ್
ರಿಷಭ್ ಪಂತ್ ಓರ್ವ ಅದ್ಭುತ ಆಟಗಾರ. ಆದರೆ, ಅವರಿಗೆ ಸಮಯವಕಾಶಬೇಕಾಗಿರುವ ಕಾರಣ, ಧೋನಿ ಜತೆ ಹೋಲಿಕೆ ಸರಿಯಲ್ಲ ಅಂತಾ 1983ರ ವರ್ಲ್ಡ್‌ಕಪ್ ಹೀರೊ ಕಪಿಲ್ ದೇವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದರ ಮಧ್ಯೆ ತಂಡದ ಉದಯೋನ್ಮುಖ ಆಟಗಾರ ರಿಷಭ್ ಪಂತ್ ಕುರಿತು ಕಪಿಲ್ ದೇವ್ ಮಾತನಾಡಿದ್ದಾರೆ. ಧೋನಿ ಜತೆ ರಿಷಭ್ ಪಂತ್ ಹೋಲಿಕೆ ಸರಿಯಲ್ಲ. ವಿಶ್ವದ ಯಾವುದೇ ಆಟಗಾರನೂ ಧೋನಿ ಸಮವಾಗಿ ಆಡಲು ಸಾಧ್ಯವಿಲ್ಲ. ಧೋನಿ ಜತೆ ರಿಷಭ್ ಹೋಲಿಕೆ ಮಾಡಿ, ಒತ್ತಡಕ್ಕೊಳಗಾಗುವಂತೆ ಮಾಡುವುದು ಸರಿಯಲ್ಲ. ಆತನ ಸಮಯ ಕೂಡ ಬರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಿಷಭ್ ಪಂತ್ ಓರ್ವ ಪ್ರತಿಭಾವಂತ ಆಟಗಾರ. ಅವರಿಗೆ ಸಮಯವಕಾಶ ಬೇಕು ಎಂದಿರುವ ಕಪಿಲ್, ವಿಶ್ವಕಪ್ನಲ್ಲಿ ಆಡಲು ವಿಕೆಟ್ ಕೀಪರ್ ಕಮ್ ಎಡಗೈ ಬ್ಯಾಟ್ಸ್‌ಮೆನ್ ಅರ್ಹ ಎಂಬ ಮಾತು ಹೇಳಿದ್ದಾರೆ. ಇದೇ ವೇಳೆ ವಿಶ್ವಕಪ್ ಗೆಲ್ಲುವುದು ಯಾವುದೇ ಅಂಗಡಿಗೆ ಹೋಗಿ ಸ್ವೀಟ್ ಖರೀದಿ ಮಾಡಿದ ಹಾಗಲ್ಲ. ಅದಕ್ಕಾಗಿ ಕಠಿಣ ಪರಿಶ್ರಮ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಸದ್ಯದ ಟೀಂ ಇಂಡಿಯಾ 1983ರ ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರ ರೀತಿ ಇಲ್ಲ ಎಂದು ಬೇಸರ ಕೂಡ ವ್ಯಕ್ತಪಡಿಸಿದ್ದಾರೆ.