ಜೋಹಾನ್ಸ್ಬರ್ಗ್: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ ಬಳಿಕ ಮತ್ತೊಮ್ಮೆ ಹರಿಣಗಳ ತಂಡದ ಕ್ಯಾಪ್ಟನ್ ಆಗಲು ಕ್ರಿಕೆಟ್ ಸೌತ್ ಆಫ್ರಿಕಾದಿಂದ ಕರೆ ಬಂದಿತ್ತು ಎಂಬ ಸುದ್ದಿಗೆ ಸ್ಪೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಸ್ಪಷ್ಟನೆ ನೀಡಿದ್ದಾರೆ.
2018ರಲ್ಲಿ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿರುವ ಎಬಿಡಿ ಮತ್ತೊಮ್ಮೆ ತಂಡಕ್ಕೆ ವಾಪಸ್ ಆಗಿ ನಾಯಕತ್ವ ವಹಿಸಿಕೊಳ್ಳುವಂತೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಕೇಳಿಕೊಂಡಿದೆ ಎಂಬುದು ಸುದ್ದಿಯಾಗಿತ್ತು. ಇದಕ್ಕೆ ಖುದ್ದಾಗಿ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿರುವ ಎಬಿಡಿ, ಅದು ಸತ್ಯಕ್ಕೆ ದೂರವಾದ ಸಮಾಚಾರ. ಕೊರೊನಾ ವಿಚಾವರಾಗಿ ಎಲ್ಲರೂ ಸುರಕ್ಷಿತವಾಗಿರಿ ಎಂದು ಹೇಳಿದ್ದಾರೆ.
ಮತ್ತೆ ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಲಿದ್ದಾರೆ ಮಿಸ್ಟರ್ 360
ಇದೇ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ ವೇಳೆಗೆ ಮತ್ತೊಮ್ಮೆ ತಂಡಕ್ಕೆ ಸೇರಿಕೊಂಡು ದಕ್ಷಿಣ ಆಫ್ರಿಕಾ ತಂಡದ ಪರ ಬ್ಯಾಟ್ ಬೀಸಿ ಎಂದು ಅವರ ಬಳಿ ಅಲ್ಲಿನ ಕ್ರಿಕೆಟ್ ಮಂಡಳಿ ಮನವಿ ಮಾಡಿಕೊಂಡಿದೆ ಎಂಬ ಸುದ್ದಿ ಈ ಹಿಂದಿನಿಂದಲೂ ಹರಿದಾಡ್ತಿದೆ. ಇದಕ್ಕೂ ಸ್ಪಷ್ಟನೆ ನೀಡಿರುವ ಮಿ.360 ನನ್ನ ಹಾಗೂ ದಕ್ಷಿಣ ಆಪ್ರಿಕಾ ಕ್ರಿಕೆಟ್ ಮಂಡಳಿ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ತಿಳಿಸಿದ್ದಾರೆ.
ವಿಲಿಯರ್ಸ್ ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಪಂದ್ಯ ಹಾಗೂ 78 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 9,577 ರನ್, ಟಿ-20ಯಲ್ಲಿ 1,672ರನ್, ಟೆಸ್ಟ್ನಲ್ಲಿ 8,765 ರನ್ ಗಳಿಸಿದ್ದಾರೆ.