ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾದಲ್ಲೇ ಅಲ್ಲ, ವಿಶ್ವದ ಯಾವ ಜಾಗದಲ್ಲಾದರು ಹಗಲು-ರಾತ್ರಿ ಟೆಸ್ಟ್​ ಪಂದ್ಯಕ್ಕೆ ನಾವು ಸಿದ್ಧ: ವಿರಾಟ್​

2018-19ರಲ್ಲಿ ಭಾರತ ತಂದ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಹಗಲು-ರಾತ್ರಿ ಟೆಸ್ಟ್​ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಆದರೆ ವಿರಾಟ್​ ಕೊಹ್ಲಿ ತಾವೂ ಮುಂದಿನ ಆಸೀಸ್ ಪ್ರವಾಸದಲ್ಲಿ ಪಿಂಕ್​ಬಾಲ್​ ಟೆಸ್ಟ್​ ಆಡಲು ಸಿದ್ಧರಿದ್ದೇವೆ ಎಂದು ಖಚಿತಪಡಿಸಿದ್ದಾರೆ.

Virat Kohli
Virat Kohli

By

Published : Jan 13, 2020, 7:50 PM IST

ಮುಂಬೈ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಹಗಲು ರಾತ್ರಿ ಟೆಸ್ಟ್​ ಪಂದ್ಯವನ್ನಾಡಲು ಭಾರತ ತಂಡ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

2018-19ರಲ್ಲಿ ಭಾರತ ತಂದ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಹಗಲು-ರಾತ್ರಿ ಟೆಸ್ಟ್​ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಆದರೆ ವಿರಾಟ್​ ಕೊಹ್ಲಿ ತಾವೂ ಮುಂದಿನ ಆಸೀಸ್ ಪ್ರವಾಸದಲ್ಲಿ ಪಿಂಕ್​ಬಾಲ್​ ಟೆಸ್ಟ್​ ಆಡಲು ಸಿದ್ಧರಿದ್ದೇವೆ ಎಂದು ಖಚಿತಪಡಿಸಿದ್ದಾರೆ.

ನಾವು ಇಲ್ಲಿ ಡೇ ಅಂಡ್​ ನೈಟ್​ ಟೆಸ್ಟ್​ ಆಡಿದ್ದೇವೆ. ಆದ್ದರಿಂದ ಅದನ್ನು ಮುಂದುವರಿಸಲು ಸಂತೋಷವಿದೆ. ಅಲ್ಲದೆ ಇದು ಭವಿಷ್ಯದಲ್ಲಿ ಯಾವುದೇ ಟೆಸ್ಟ್​ ಸರಣಿಯಲ್ಲಾದರೂ ವಿಶೇಷ ಭಾಗವಾಗಿರುತ್ತದೆ. ನಾವು ಡೇ ಅಂಡ್​ ಟೆಸ್ಟ್​ ಆಡಲು ಸಂಪೂರ್ಣ ಸಿದ್ಧರಿದ್ದೇವೆ ಎಂದು ಆಸೀಸ್​ ವಿರುದ್ಧದ ಏಕದಿನ ಸರಣಿಯ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ

ನಾವು ಸವಾಲನ್ನು ಸ್ವೀಕರಿಸಲು ಸಿದ್ದರಿದ್ದೇವೆ, ಅದು ಗಬ್ಬ ಅಥವಾ ಪರ್ತ್ ಯಾವುದೇ ಕ್ರೀಡಾಂಗಣವಾದರು ನಮಗೆ ಸಮಸ್ಯೆಯಿಲ್ಲ. ನಾವು ಉತ್ತಮ ​ ಕೌಶಲ್ಯಗಳನ್ನು ಮೈಗೂಡಿಸಿಕೊಂಡಿದ್ದು, ವಿಶ್ವದ ಯಾವುದೇ ತಂಡದ ವಿರುದ್ಧವಾದರೂ, ಯಾವುದೇ ಫಾರ್ಮೇಟ್​ನಲ್ಲಾದರೂ ಯಾವುದೇ ರೀತಿಯ ಸ್ಪರ್ಧೆಗಾದರೂ ಸಂಪೂರ್ಣ ಸಿದ್ಧರಿದ್ದೇವೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ ಕಳೆದಬಾರಿ ಆಸೀಸ್​ ಪ್ರವಾಸ ಕೈಗೊಂಡಿದ್ದಾಗ ಏಕದಿನ ಸರಣಿಯನ್ನು 2-1ರಲ್ಲಿ, ಟೆಸ್ಟ್​ ಸರಣಿಯನ್ನು 2-1ರಲ್ಲಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಆದರೆ ಆ ಸಂದರ್ಭದಲ್ಲಿದ್ದ ತಂಡಕ್ಕಿಂತ ಪ್ರಸ್ತುತ ಆಸ್ಟ್ರೇಲಿಯಾ ತಂಡ ಬಲಿಷ್ಠವಾಗಿದೆ. ಸ್ಮಿತ್​, ವಾರ್ನರ್​ ತಂಡಕ್ಕೆ ಮರಳಿದ್ದಾರೆ. ಲಾಬುಶೇನ್​ ಅಂದು ಕೇವಲ ಒಂದು ಪಂದ್ಯವನ್ನಾಡಿದ್ದರು. ಆದರೆ ಅವರು ಅದ್ಭುತ ಫಾರ್ಮ್​ನಲ್ಲಿದ್ದಾರೆ ಹಾಗಾಗಿ ಮುಂದಿನ ಆಸ್ಟ್ರೇಲಿಯಾ ತಂಡವನ್ನು ಮಣಿಸುವುದು ಸುಲಭದ ಮಾತಲ್ಲ. ನಾವಿಬ್ಬರು ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಮೊದಲೆರಡು ಸ್ಥಾನದಲ್ಲಿದ್ದೇವೆ. ಇಬ್ಬರ ನಡುವಿನ ಸರಣಿ ನೋಡಲು ಅದ್ಭುತವಾಗಿರುತ್ತದೆ. ಅಲ್ಲದೆ ಈ ಬಾರಿಯ ಸರಣಿ ಕಳೆದ 5-6 ವರ್ಷಗಳ ಹಿಂದಿನ ಸರಣಿಗಿಂದ ಸಂಪೂರ್ಣ ವಿಭಿನ್ನವಾಗಿರಲಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details