ಬೆಂಗಳೂರು:ಈ ಹಿಂದೆ ಐಪಿಎಲ್ನಲ್ಲಿನ ಕೆಲ ಆಟಗಾರರ ಕಾಲೆಳೆಯುವ ಕೆಲಸ ಮಾಡಿದ್ದ 'ಹಂಬಲ್ ಪೊಲಿಟೀಷಿಯನ್ ನೊಗರಾಜ್' ಇದೀಗ ನ್ಯೂಜಿಲ್ಯಾಂಡ್ ತಂಡದ ಆಟಗಾರರಾದ ಕಾಲಿನ್ ಡಿ ಗ್ರ್ಯಾಂಡ್ಹೋಮ್ ಹಾಗೂ ಟಿಮ್ ಸೌಥಿ ಕಾಲೆಳೆಯುವ ಕೆಲಸ ಮಾಡಿದ್ದಾರೆ.
ಮಾರಿ ಕಣ್ಣು ಹೋರಿ ಮ್ಯಾಗೆ... ಕಟುಕನ ಕಣ್ಣು ಕುರಿ ಮ್ಯಾಗೆ: ಸಾಂಗ್ ಹಾಡಿದ ಸೌಥಿ, ಗ್ರ್ಯಾಂಡ್ಹೋಮ್!
ಈ ಹಿಂದೆ ಕೂಡ ಆರ್ಸಿಬಿ ತಂಡದ ಅನೇಕ ಪ್ಲೇಯರ್ಸ್ ಕಾಲೆಳೆಯುವ ಕೆಲಸ ಮಾಡಿದ್ದ ಮಿಸ್ಟರ್ ನೊಗರಾಜ್ ಸದ್ಯ ಟಿಮ್ ಸೌಥಿ ಹಾಗೂ ಗ್ರ್ಯಾಂಡ್ಹೋಮ್ ಜತೆಗೂ ಸಂದರ್ಶನ ನಡೆಸಿದ್ದು, ಇದೀಗ ಅದರ ವಿಡಿಯೋ ರಿಲೀಸ್ ಆಗಿದೆ.
'ಮಂಡ್ಯದ ಗಂಡು' ಎಬಿ ಡಿವಿಲಿಯರ್ಸ್! ಮಿ.ನೊಗರಾಜ್ ಜೊತೆ 'ಮಿ.360' ಕನ್ನಡದಲೇ ಮಾತು!
ಆರ್ಸಿಬಿ ಇನ್ಸೈಡರ್ ಶೋದಲ್ಲಿ ಇವರಿಬ್ಬರೊಂದಿಗೆ ನೊಗರಾಜ್ ಸಂದರ್ಶನ ನಡೆಸಿದ್ದಾರೆ. ನ್ಯೂಜಿಲ್ಯಾಂಡ್ನಲ್ಲಿ ಸಿಕ್ಕಾಪಟ್ಟೆ ಕುರಿಗಳಿದ್ದು, ನಿಮ್ಮ ಬಳಿ ಎಷ್ಟು ಕುರಿಗಳಿವೆ ಎಂದು ಕೇಳಿದ್ದು, ಅದಕ್ಕೆ ಇಬ್ಬರು ಪ್ಲೇಯರ್ ಉತ್ತರಿಸಿದ್ದಾರೆ. ಇದೇ ವೇಳೆ, ಅಂಡರ್-19 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಟೀಂ ಪ್ರಶಸ್ತಿ ಗೆದ್ದರೂ ನೀವೂ ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿ ಪಡೆದುಕೊಂಡಿದ್ದೀರಿ ಎಂದು ಸೌಥಿಗೆ ಕೇಳಿದ್ದಾರೆ. ಸುಮಾರು ಆರು ನಿಮಿಷಗಳ ಕಾಲ ನಡೆದ ಸಂವಾದದಲ್ಲಿ ಮಾರಿ ಕಣ್ಣು ಹೋರಿ ಮ್ಯಾಗೆ...ಕಟುಕನ್ ಕಣ್ಣು ಕುರಿ ಮ್ಯಾಗೆ ಎಂಬ ಹಾಡನ್ನ ಕೂಡ ಇಬ್ಬರು ಪ್ಲೇಯರ್ಸ್ಗಳ ಬಾಯಿಂದ ಹೇಳಿಸಿದ್ದಾರೆ.
ಈ ಹಿಂದೆ ಕೂಡ ಮಿ.360 ಖ್ಯಾತಿಯ ಎಬಿಡಿ ಜೊತೆ ಕನ್ನಡದಲ್ಲೇ ಸಂದರ್ಶನ ನಡೆಸಿ ಅವರಿಂದ 'ಮಂಡ್ಯದ ಗಂಡು' ಸಾಂಗ್ ಹಾಡಿಸಿದ್ದರು. ಆರ್ಸಿಬಿ ಇನ್ಸೈಡರ್ ಸ್ಟೋರಿ ಎಂಬ ಕಾರ್ಯಕ್ರಮದಲ್ಲಿ ಇಬ್ಬರು ಪ್ಲೇಯರ್ಸ್ ಮಾತನಾಡಿದ್ದು, ಏನೆಲ್ಲ ಹಂಚಿಕೊಂಡಿದ್ದಾರೆ ಎಂಬುದನ್ನ ನೀವೂ ನೋಡಿ.