ದುಬೈ:ಅರಬ್ ದೇಶದಲ್ಲಿ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳಲು ದಿನಗಣನೇ ಆರಂಭಗೊಂಡಿದ್ದು, ಮುಂದಿನ ತಿಂಗಳು ಸೆಪ್ಟೆಂಬರ್ 19ರಿಂದ ಈ ಮಹತ್ವದ ಟೂರ್ನಿ ಶುರುವಾಗಲಿದೆ.
ಈಗಾಗಲೇ ಎಲ್ಲ ತಂಡಗಳು ಅರಬ್ ದೇಶದಲ್ಲಿ ಬಿಡುಬಿಟ್ಟಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ಸೆಣಸಾಟ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಈಗಾಗಲೇ ದುಬೈನಲ್ಲಿದ್ದು, ಇಂದು ತಂಡದ ಇತರೆ ಆಟಗಾರರು, ಕ್ಯಾಪ್ಟನ್ ಕೊಹ್ಲಿ ಹಾಗೂ ಕೋಚ್ ಮಹತ್ವದ ಮೀಟಿಂಗ್ ನಡೆಸಿದರು. ಈ ವಿಡಿಯೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಟ್ವೀಟರ್ನಲ್ಲಿ ಶೇರ್ ಮಾಡಿದೆ.
13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ಗೋಸ್ಕರ ಎಲ್ಲ ತಂಡಗಳು ವಿಶೇಷ ಯೋಜನೆ ರೂಪಿಸಿಕೊಂಡಿದ್ದು, ಪ್ರಶಸ್ತಿ ಗೆಲ್ಲುವ ಪ್ಲಾನ್ ಹಾಕಿಕೊಳ್ಳುತ್ತಿವೆ. ಕಳೆದ ಯಾವುದೇ ಆವೃತ್ತಿಯಲ್ಲೂ ಚಾಂಪಿಯನ್ ಆಗದ ಆರ್ಸಿಬಿಗೆ ಈ ಸಲದ ಟೂರ್ನಿ ಮಹತ್ವದಾಗಿದೆ. ವಿಡಿಯೋ ಕಾನ್ಪರೆನ್ಸ್ ಮೂಲಕವೇ ಮೀಟಿಂಗ್ ನಡೆಸಲಾಗಿದ್ದು, ಈ ವೇಳೆ ಕೊರೊನಾ ಪ್ರೋಟೋ ಕಾಲ್ ಸರಿಯಾಗಿ ಅನುಸರಣೆ ಮಾಡುವಂತೆ ತಿಳಿಸಿದ್ದಾರೆ. ಜತೆಗೆ ಕೊರೊನಾ ಹರಡದಂತೆ ತಡೆಯಲು ಹೊರಡಿಸಿರುವ ಯಾವುದೇ ಮಾರ್ಗಸೂಚಿ ಬ್ರೇಕ್ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.
ಎಲ್ಲರೂ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಲು ಉತ್ಸುಕರಾಗಿದ್ದು, ತಂಡದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವುದು ಅವಶ್ಯ ಎಂದಿದ್ದಾರೆ. ಸೆಪ್ಟೆಂಬರ್ 19ರಿಂದ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದ್ದು, ನವೆಂಬರ್ 10ರಂದು ಫೈನಲ್ ಪಂದ್ಯ ನಡೆಯಲಿದೆ. ಒಟ್ಟು 53 ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಅನೇಕ ದಾಖಲೆ ನಿರ್ಮಾಣಗೊಳ್ಳುವುದು ಬಹುತೇಕ ಖಚಿತವಾಗಿದೆ.