ಕರ್ನಾಟಕ

karnataka

ETV Bharat / sports

ಟಿ-20 ಕ್ರಿಕೆಟ್​ನಲ್ಲಿ ಅಶ್ವಿನ್ ಕಡೆಗಣನೆ ಬೇಡ, ಆತ ಈಗಲೂ ಭಾರತ ತಂಡಕ್ಕೆ ಮೌಲ್ಯಯುತ ಆಸ್ತಿ: ಕೈಫ್

ಕಳೆದ 2 ವರ್ಷಗಳಿಂದ ಆಯ್ಕೆಗಾರರು ಆಶ್ವಿನ್​ಗಿಂತಲೂ ಯುಜ್ವೇಂದ್ರ ಚಹಾಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ವಾಷಿಂಗ್ಟನ್​ ಸುಂದರ್​ಗೆ ಹೆಚ್ಚಿನ ಅವಕಾಶ ನೀಡುತ್ತಿದ್ದಾರೆ. ಅಶ್ವಿನ್​ರನ್ನು ಕೇವಲ ಟೆಸ್ಟ್​ಗೆ ಮಾತ್ರ ಪರಿಗಣಿಸಲಾಗುತ್ತಿದೆ. ಆದರೆ ಡೆಲ್ಲಿ ತಂಡದ ಫೀಲ್ಡಿಂಗ್ ಕೋಚ್​ ಆಗಿದ್ದ ಮೊಹಮ್ಮದ್​ ಕೈಫ್,​ 2021ರಲ್ಲಿ ಅಶ್ವಿನ್​ರ ಬೌಲಿಂಗ್​ಅನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಹಾಗಾಗಿ ಭಾರತ ತಂಡದಲ್ಲಿ ಅವರ ಸಾಮರ್ಥ್ಯವನ್ನು ಸಾಬೀತುಪಡಿಸಲು ಮತ್ತೊಂದು ಅವಕಾಶ ನೀಡಬೇಕೆಂದು ಬಿಸಿಸಿಐಗೆ ಮನವಿ ಮಾಡಿದ್ದಾರೆ.

ರವಿಚಂದ್ರನ್ ಅಶ್ವಿನ್
ರವಿಚಂದ್ರನ್ ಅಶ್ವಿನ್

By

Published : Nov 18, 2020, 10:42 PM IST

ಮುಂಬೈ:ಭಾರತ ತಂಡದ ಅನುಭವಿ ಸ್ಪಿನ್​ ಬೌಲರ್​ ರವಿಚಂದ್ರನ್ ಅಶ್ವಿನ್​ಗೆ ಅವರ ಸಾಮರ್ಥ್ಯ ಸಾಬೀತುಪಡಿಸಲು ಟಿ-20 ತಂಡದಲ್ಲಿ ಮತ್ತೊಂದು ಅವಕಾಶ ನೀಡಬೇಕೆಂದು ಮಾಜಿ ಬ್ಯಾಟ್ಸ್​ಮನ್​ ಮೊಹಮ್ಮದ್ ಕೈಫ್​ ಅಭಿಪ್ರಾಯಪಟ್ಟಿದ್ದಾರೆ.

ಕಳೆದ 2 ವರ್ಷಗಳಿಂದ ಆಯ್ಕೆಗಾರರು ಆಶ್ವಿನ್​ಗಿಂತಲೂ ಯುಜ್ವೇಂದ್ರ ಚಹಾಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ವಾಷಿಂಗ್ಟನ್​ ಸುಂದರ್​ಗೆ ಹೆಚ್ಚಿನ ಅವಕಾಶ ನೀಡುತ್ತಿದ್ದಾರೆ. ಅಶ್ವಿನ್​ರನ್ನು ಕೇವಲ ಟೆಸ್ಟ್​ಗೆ ಮಾತ್ರ ಪರಿಗಣಿಸಲಾಗುತ್ತಿದೆ. ಆದರೆ ಡೆಲ್ಲಿ ತಂಡದ ಫೀಲ್ಡಿಂಗ್ ಕೋಚ್​ ಆಗಿದ್ದ ಮೊಹಮ್ಮದ್​ ಕೈಫ್​ 2021ರಲ್ಲಿ ಅಶ್ವಿನ್​ರ ಬೌಲಿಂಗ್​ಅನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಹಾಗಾಗಿ ಭಾರತ ತಂಡದಲ್ಲಿ ಅವರ ಸಾಮರ್ಥ್ಯವನ್ನು ಸಾಬೀತುಪಡಿಸಲು ಮತ್ತೊಂದು ಅವಕಾಶ ನೀಡಬೇಕೆಂದು ಬಿಸಿಸಿಐಗೆ ಮನವಿ ಮಾಡಿದ್ದಾರೆ.

ವಿರಾಟ್​ ಕೊಹ್ಲಿ, ಪೊಲಾರ್ಡ್​, ಕ್ರಿಸ್​ ಗೇಲ್​, ವಾರ್ನರ್​, ಡಿಕಾಕ್, ಕರುಣ್, ಬಟ್ಲರ್​, ಸ್ಮಿತ್, ಪಡಿಕ್ಕಲ್​, ಪೂರನ್ 13ನೇ ಐಪಿಎಲ್​ನಲ್ಲಿ ರವಿಚಂದ್ರನ್ ಅಶ್ವಿನ್​ ಪಡೆದಿರುವ ದೊಡ್ಡ ವಿಕೆಟ್​ಗಳು. ಅದರಲ್ಲೂ ಪವರ್​ ಪ್ಲೇನಲ್ಲಿ ಹೆಚ್ಚು. ಅಶ್ವಿನ್​ ಭಾರತ ಟಿ-20 ತಂಡದ ಮೌಲ್ಯಯುತ ಆಸ್ತಿ ಎಂದು ನಾನು ಭಾವಿಸುತ್ತೇನೆ ಎಂದು ಕೈಫ್ ಟ್ವೀಟ್ ಮಾಡಿದ್ದಾರೆ.

ಪೀಲ್ಡಿಂಗ್​ನಲ್ಲಿ ನಿಬಂಧನೆಗಳಿರುವ ಸಂದರ್ಭದಲ್ಲಿ ಅಶ್ವಿನ್​ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಬಿಸಿಸಿಐ ಅವರಿಗೆ ಮತ್ತೊಂದು ಅವಕಾಶ ನೀಡಬೇಕಿದೆ ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಅಭಿಪ್ರಾಯಪಟ್ಟಿದ್ದಾರೆ.

2020ರ ಐಪಿಎಲ್​ನಲ್ಲಿ ಅಶ್ವಿನ್​ ಡೆಲ್ಲಿ ಕ್ಯಾಪಿಟಲ್ಸ್​ ಪರ 15 ಪಂದ್ಯಗಳಿಂದ 13 ವಿಕೆಟ್​ ಪಡೆದಿದ್ದರು. ಅಶ್ವಿನ್ ಭಾರತ ಪರ ಟಿ-20 ಕ್ರಿಕೆಟ್​ನಲ್ಲಿ 46 ಪಂದ್ಯಗಳಿಂದ 52 ವಿಕೆಟ್​ ಪಡೆದಿದ್ದಾರೆ.

ABOUT THE AUTHOR

...view details