ಮುಂಬೈ:ಮುಂಬೈನಲ್ಲಿಕಪಿಲ್ ದೇವ್ ನೇತೃತ್ವದ ತ್ರಿಸದಸ್ಯ ಸಮಿತಿ ಟೀಂ ಇಂಡಿಯಾ ಮುಖ್ಯ ತರಬೇತುದಾರ ಹುದ್ದೆಗೆ ಸಂದರ್ಶನ ನಡೆಸುತ್ತಿದೆ. ಇಂದು ಸಂಜೆ 7 ಗಂಟೆಗೆ ನೂತನ ಮುಖ್ಯ ಕೋಚ್ ಹೆಸರು ಘೋಷಣೆಯಾಗಲಿದೆ.
ಸಂಜೆ 7 ಗಂಟೆಗೆ ಬಿಸಿಸಿಐ ಸುದ್ದಿಗೋಷ್ಟಿ ನಡೆಸಲಿದ್ದು, ಮುಖ್ಯ ತರಬೇತುದಾರರ ಹುದ್ದೆಗೆ ಯಾರನ್ನ ಆಯ್ಕೆ ಮಾಡಲಾಗಿದೆ ಎಂದು ಅಧಿಕೃತವಾಗಿ ಘೋಷಣೆ ಆಗಲಿದೆ.
ನ್ಯೂಜಿಲ್ಯಾಂಡ್ನ ಮಾಜಿ ಕೋಚ್ ಮೈಕ್ ಹಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಹಾಗೂ ಶ್ರೀಲಂಕಾ ಕೋಚ್ ಟಾಮ್ ಮೂಡಿ, ಆಫ್ಘಾನಿಸ್ತಾನದ ಕೋಚ್ ಸಿಮನ್ಸ್, ಟೀಂ ಇಂಡಿಯಾ ಮಾಜಿ ಮ್ಯಾನೇಜರ್ ಲಾಲ್ಚಂದ್ ರಜಪೂತ್, ರಾಬಿನ್ ಸಿಂಗ್, ಹಾಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರ ಹೆಸರುಗಳನ್ನು ಫೈನಲ್ ಮಾಡಿದ್ದು, ಕಪಿಲ್ ದೇವ್ ನೇತೃತ್ವದ ತ್ರಿಸದಸ್ಯ ಸಮಿತಿ ಸಂದರ್ಶನ ನಡೆಸುತ್ತಿದೆ.
ಆದರೆ, ಲಭ್ಯವಾಗಿರುವ ಮಾಹಿತಿ ಪ್ರಕಾರ, ಮತ್ತೊಂದು ಅವಧಿಗೆ ಕೋಚ್ ಆಗಿ ರವಿಶಾಸ್ತ್ರಿ ಆಯ್ಕೆಯಾಗುವುದು ಬಹುತೇಕ ಖಚಿತವೆಂದು ಹೇಳಲಾಗುತ್ತಿದೆ. ಬಿಸಿಸಿಐಗೂ ರವಿಶಾಸ್ತ್ರಿ ಅವರನ್ನೇ ಕೋಚ್ ಆಗಿ ಮುಂದುವರಿಸುವ ಇರಾದೆ ಇದೆ ಎನ್ನಲಾಗಿದ್ದು, ಅದಕ್ಕೆ ತಂಡದ ಆಟಗಾರರು ಸಮ್ಮತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಕೊಹ್ಲಿ ಕೂಡ ರವಿಶಾಸ್ತ್ರಿ ಅವರನ್ನೇ ತಂಡದ ಕೋಚ್ ಆಗಿ ಮುಂದುವರಿಸುವ ಬಗ್ಗೆ ಸುಳಿವು ಸಹ ನೀಡಿದ್ದರು.