ಮುಂಬೈ: ಕೆಕೆಆರ್ ತಂಡದ ಬ್ಯಾಟ್ಸ್ಮನ್ ನಿತೀಶ್ ರಾಣಾ ಕೋವಿಡ್ ಟೆಸ್ಟ್ನಲ್ಲಿ ನೆಗೆಟಿವ್ ಪಡೆದ ನಂತರ ಶುಕ್ರವಾರ ತಂಡ ಸೇರಿಕೊಂಡಿದ್ದು, ಸಹ ಆಟಗಾರರೊಂದಿಗೆ ತರಬೇತಿ ನಡೆಸಿದ್ದಾರೆ.
ಮಾರ್ಚ್ 22 ರಂದು ರಾಣಾ ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ಪಡೆದಿದ್ದರು. ಕ್ವಾರಂಟೈನ್ ಮುಗಿಸಿದ್ದ ಅವರು, ಗುರುವಾರ ನಡೆಸಿದ ಕೋವಿಡ್ 19 ಪರೀಕ್ಷೆಯಲ್ಲಿ ನೆಗೆಟಿವ್ ಪಡೆದು, ಶುಕ್ರವಾರ ಅಭ್ಯಾಸ ನಡೆಸಿದ್ದಾರೆ.
ಬಿಸಿಸಿಐ ಮಾರ್ಗಸೂಚಿಗಳ ಪ್ರಕಾರ ರಾಣಾ ಕೋವಿಡ್ 19 ನೆಗೆಟಿವ್ ಬರುವವರೆಗೂ 11 ದಿನಗಳ ಕಾಲ ಕ್ವಾರಂಟೈನ್ನಲ್ಲಿದ್ದರು.
ಕೊನೆಗೂ ನಾನು ಹೊರಬಂದಿದ್ದೇನೆ. ನಾನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ಇದು ನನ್ನ ಅಭ್ಯಾಸದ ಮೊದಲ ದಿನ, ಸ್ವಲ್ಪ ಬ್ಯಾಟಿಂಗ್ ಮಾಡಿದ್ದೇನೆ. ನಮ್ಮ ಕೆಕೆಆರ್ ತಂಡದ ಸಹ ಆಟಗಾರರನ್ನು ಸೇರಿಕೊಂಡಿರುವುದು ಖುಷಿ ತಂದಿದೆ ಎಂದು ಕೆಕೆಆರ್ ವೆಬ್ಸೈಟ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.
ದಯವಿಟ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಮತ್ತು ಈ ವಿಷಯವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಮುಂದೆ ಏನಾಗಲಿದೆ ಎಂದು ನಿಮಗೆ ತಿಳಿದಿಲ್ಲ, ಆದ್ದರಿಂದ ದಯವಿಟ್ಟು ನೀಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಜೋಪಾನವಾಗಿ ನೋಡಿಕೊಳ್ಳಿ, ಸುರಕ್ಷಿತವಾಗಿರಿ" ಎಂದು ರಾಣಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಇದನ್ನು ಓದಿ:ರಿಷಭ್ ಪಂತ್ ಒಬ್ಬ ಪರಿಪೂರ್ಣ ಮ್ಯಾಚ್ ವಿನ್ನರ್ : ಸೌರವ್ ಗಂಗೂಲಿ