ನವದೆಹಲಿ:ವಿದೇಶಗಳಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗಿಯಾಗಲೂ ಭಾರತೀಯ ಪ್ಲೇಯರ್ಸ್ಗಳಿಗೂ(ಗುತ್ತಿಗೆ ಮಾಡಿಕೊಳ್ಳದ ಪ್ಲೇಯರ್ಸ್) ಅವಕಾಶ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಬೌಲರ್ ಇರ್ಫಾನ್ ಪಠಾಣ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸುರೇಶ್ ರೈನಾ ಬಿಸಿಸಿಐ ಬಳಿ ಮನವಿ ಮಾಡಿದ್ದಾರೆ.
2020ರ ಜನವರಿ ತಿಂಗಳಲ್ಲಿ ಎಲ್ಲ ರೀತಿಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿರುವ ಇರ್ಫಾನ್ ಪಠಾಣ್, ಹಾಗೂ ಟೀಂ ಇಂಡಿಯಾ ತಂಡದಲ್ಲಿ ಮತ್ತೊಮ್ಮೆ ಜಾಗ ಪಡೆದುಕೊಳ್ಳಲು ಹರಸಾಹಸ ಪಡುತ್ತಿರುವ ಸುರೇಶ್ ರೈನಾ, ಜುಲೈ 2018ರಲ್ಲಿ ಭಾರತದ ಪರ ಕೊನೆಯ ಪಂದ್ಯದಲ್ಲಿ ಭಾಗಿಯಾಗಿದ್ದರು.
ಪಠಾಣ್ ಜತೆ ಇನ್ಸ್ಟಾಗ್ರಾಂನಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ವೇಳೆ ಬಿಸಿಸಿಐ, ಐಸಿಸಿ ಹಾಗೂ ಫ್ರಾಂಚೈಸಿಗಳು ಸೇರಿ ಯಾರು ರಾಷ್ಟ್ರೀಯ ತಂಡದಲ್ಲಿ ಕ್ರಿಕೆಟ್ ಆಡುತ್ತಿಲ್ಲವೋ ಅಂತಹ ಪ್ಲೇಯರ್ಸ್ಗಳಿಗೆ ವಿದೇಶಿ ಟೂರ್ನಿಗಳಲ್ಲಿ ಭಾಗಿಯಾಗಲು ಅನುಮತಿ ನೀಡಬೇಕು. ಎರಡು ವಿದೇಶಿ ಲೀಗ್ಗಳಲ್ಲಿ ಭಾಗಿಯಾಗಲು ಅವಕಾಶ ನೀಡಿದ್ರೆ, ತಂಡಕ್ಕೆ ಕಮ್ಬ್ಯಾಕ್ ಮಾಡಲು ಸಹಕಾರಿಯಾಗುತ್ತದೆ ಎಂದಿದ್ದಾರೆ.
ಸದ್ಯ ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡದ ಕೋಚ್ ಆಗಿರುವ ಇರ್ಫಾನ್ ಪಠಾಣ್, ಈಗಾಗಲೇ ನನ್ನ ಬಳಿ ಮೂರು ಫ್ರಾಂಚೈಸಿಗಳು ಮಾತುಕತೆ ನಡೆಸಿದ್ದವು. ಆದರೆ ಬಿಸಿಸಿಐ ಅವಕಾಶ ನೀಡದ ಕಾರಣ ನಾನು ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಸುರೇಶ್ ರೈನಾ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಬ್ಯಾಟ್ ಬೀಸುತ್ತಿದ್ದಾರೆ. ಆದರೆ ದೇಶದಲ್ಲಿ ಲಾಕ್ಡೌನ್ ಹಾಗೂ ಕೊರೊನಾ ಅಬ್ಬರ ಜೋರಾಗಿರುವ ಕಾರಣ ಟೂರ್ನಿ ಮುಂದೂಡಿಕೆಯಾಗಿದೆ.