ಕರ್ನಾಟಕ

karnataka

By

Published : Dec 20, 2019, 10:11 PM IST

ETV Bharat / sports

ಅಂಡರ್​ 14 ಟೂರ್ನಿಯಲ್ಲಿ ದ್ರಾವಿಡ್ ಪುತ್ರನ ಅಬ್ಬರ.. ದ್ವಿಶತಕ ದಾಖಲಿಸಿದ ಸಮಿತ್!

ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಪುತ್ರ ಸಮಿತ್ ರಾಜ್ಯಮಟ್ಟದ ಅಂಡರ್​ 14 ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

Rahul Dravid's son Samit hits double hundred, ರಾಹುಲ್ ದ್ರಾವಿಡ್ ಪುತ್ರ ದ್ವಿಶತಕ
ದ್ರಾವಿಡ್ ಪುತ್ರ ಸಮಿತ್

ಬೆಂಗಳೂರು:ಟೀಂ ಇಂಡಿಯಾ ಮಾಜಿ ಆಟಗಾರ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಪುತ್ರ ಸಮಿತ್ ರಾಜ್ಯಮಟ್ಟದ ಅಂಡರ್​ 14 ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

ಧಾರವಾಡ ವಲಯ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ವೈಸ್-ಪ್ರೆಸಿಡೆಂಟ್ ತಂಡದ ಪರ ಸಮಿತ್ ದ್ವಿಶತಕ ದಾಖಲಿಸಿದ್ದಾರೆ. ದ್ವಿತೀಯ ಇನ್ನಿಂಗ್ಸ್​​ನಲ್ಲಿ ಅಜೇಯ 94 ರನ್ ಸಿಡಿಸಿದ್ದಲ್ಲದೆ 3 ವಿಕೆಟ್ ಕಬಳಿಸಿ ಆಲ್​​ರೌಂಡ್​ ಆಟ ಪ್ರದರ್ಶಿಸಿದ್ದಾರೆ.

256 ಚೆಂಡುಗಳನ್ನ ಎದುರಿಸಿದ ಸಮಿತ್ 22 ಬೌಂಡರಿ ಸಹಿತ 201 ರನ್​ ಗಳಿಸಿದ್ದು, ಬೌಲಿಂಗ್​ನಲ್ಲಿ 26 ರನ್​ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ.

ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಅಂಡರ್​-12 ಕ್ರಿಕೆಟ್ ಪಂದ್ಯದಲ್ಲಿ ಸಮಿತ್ ಮೂರು ಅರ್ಧಶತಕ ಸಿಡಿಸಿ ಸುದ್ದಿಯಾಗಿದ್ದರು.

ABOUT THE AUTHOR

...view details