ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಬಳಿಕ ಪಿತೃತ್ವ ರಜೆ ಮೇಲೆ ತವರಿಗೆ ಮರಳಿದ ನಂತರ ತಂಡವನ್ನು ರಹಾನೆ ಉತ್ತಮ ಉತ್ತಮವಾಗಿ ಮುನ್ನಡೆಸಲಿದ್ದಾರೆ ಎಂದು ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ ಅವರನ್ನು ಬೆಂಬಲಿಸಿದ್ದಾರೆ. ನಾವಿಬ್ಬರೂ ಪರಸ್ಪರ ನಂಬಿಕೆ ಮತ್ತು ಗೌರವ ಹೊಂದಿದ್ದೇವೆ ಎಂದಿದ್ದಾರೆ.
ಗುರುವಾರದಿಂದ ಪ್ರಾರಂಭವಾಗುವ ಹಗಲು-ರಾತ್ರಿ ಟೆಸ್ಟ್ ಪಂದ್ಯದ ನಂತರ ಕೊಹ್ಲಿ ತವರಿಗೆ ಮರಳಲಿದ್ದು, ಉಳಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.
ನಾವು ಪರಸ್ಪರ ತಿಳುವಳಿಕೆ ಮತ್ತು ಗೌರವ ಹೊಂದಿದ್ದೇವೆ. ನಾವು ಒಟ್ಟಿಗೆ ಬ್ಯಾಟಿಂಗ್ ಮಾಡುವಾಗ ಉತ್ತಮ ಜೊತೆಯಾಟ ಆಡಿದ್ದೇವೆ. ಇದು ತಂಡಕ್ಕೆ ಏನು ಮಾಡಬೇಕೆಂಬುದರ ಬಗ್ಗೆ ವಿಶ್ವಾಸ ತುಂಬಲಿದೆ ಎಂದು ವಿರಾಟ್ ತಮ್ಮ ಜೊತೆಯಾಟದ ಬಗ್ಗೆ ಹೇಳಿದ್ದಾರೆ.
"ಎರಡು ಅಭ್ಯಾಸ ಪಂದ್ಯಗಳಲ್ಲಿ ರಹಾನೆ ಅದ್ಭುತ ನಿರ್ವಹಣೆ ತೋರಿದ್ದಾರೆ ಮತ್ತು ಅವರು ತುಂಬಾ ಸಂಯೋಜನೆ ಹೊಂದಿದ್ದಾರೆಂದು ತೋರುತ್ತದೆ. ನಮ್ಮ ತಂಡದ ಸಾಮರ್ಥ್ಯಗಳು ಮತ್ತು ನಾವು ಯಾವ ವಿಷಯಗಳ ಬಗ್ಗೆ ಗಮನಹರಿಸಬೇಕು ಎಂದು ಅವರಿಗೆ ತಿಳಿದಿದೆ" ಎಂದು ಹೇಳಿದ್ದಾರೆ.
ಓದಿಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ: 11ರ ಬಳಗದಿಂದ ರಾಹುಲ್, ಪಂತ್ ಔಟ್
"ನಾನು ತವರಿಗೆ ಹಿಂದಿರುಗಿದಾಗ ಅವರು ಉತ್ತಮವಾಗಿ ತಂಡವನ್ನು ಮುನ್ನಡೆಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಪ್ರತೀ ಪಂದ್ಯದಲ್ಲಿ ಉತ್ತಮ ಪ್ರದರ್ರಶನ ತೊರುವುದು, ಆ ಮೂಲಕ ಸರಣಿ ಗೆಲ್ಲುವುದು ನಮ್ಮ ಮುಖ್ಯ ಉದ್ದೇಶವಾಗಿದೆ" ಎಂದು ವಿರಾಟ್ ಹೇಳಿದ್ದಾರೆ.