ಕರ್ನಾಟಕ

karnataka

ETV Bharat / sports

ಐಪಿಎಲ್ ಹರಾಜಿನ ಮೇಲೆ ಕಣ್ಣು: ಒಂದೇ ಓವರ್​ನಲ್ಲಿ ಐದು ಸಿಕ್ಸರ್​ ಸಿಡಿಸಿದ ಅರ್ಜುನ್​! - 73ನೇ ಪೊಲೀಸ್ ಆಹ್ವಾನ ಶೀಲ್ಡ್ ಕ್ರಿಕೆಟ್ ಪಂದ್ಯಾವಳಿ

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಹರಾಜುಗೊಳ್ಳಲು ಸಜ್ಜುಗೊಳ್ಳುತ್ತಿರುವ ಅರ್ಜುನ್ ತೆಂಡೂಲ್ಕರ್ ಇದೀಗ ಮುಂಬೈನಲ್ಲಿ ನಡೆದ ಪೊಲೀಸ್ ಶೀಲ್ಡ್ ಟೂರ್ನಿಯಲ್ಲಿ ಗಮನ ಸೆಳೆದಿದ್ದಾರೆ.

Arjun Tendulkar
Arjun Tendulkar

By

Published : Feb 15, 2021, 3:19 PM IST

ಮುಂಬೈ:ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಹರಾಜುಗೊಳ್ಳಲು ಸಜ್ಜುಗೊಳ್ಳುತ್ತಿರುವ ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್​ ಇದೀಗ ಪೊಲೀಸ್ ಶೀಲ್ಡ್ ಟೂರ್ನಿಯಲ್ಲಿ ಮಿಂಚು ಹರಿಸಿದ್ದಾರೆ.

73ನೇ ಪೊಲೀಸ್ ಆಹ್ವಾನ ಶೀಲ್ಡ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಲ್​ರೌಂಡ್​ ಆಟದ ಮೂಲಕ ಅರ್ಜುನ್​ ತೆಂಡೂಲ್ಕರ್ ಗಮನ ಸೆಳೆದಿದ್ದಾರೆ. ಕೇವಲ 31 ಎಸೆತಗಳಲ್ಲಿ 77ರನ್​ಗಳಿಕೆ ಮಾಡಿದ್ರೆ, 41ರನ್​ ನೀಡಿ 3 ವಿಕೆಟ್ ಕಬಳಿಕೆ ಮಾಡಿದ್ದಾರೆ.

ಓದಿ: ಭಾರತದಲ್ಲಿ ನಮ್ಮ ತಂಡ ಸ್ಪಿನ್​ ​ಬೌಲಿಂಗ್​​​​​ ಸಮರ್ಥವಾಗಿ ಆ​ಡುವುದನ್ನ ಕಲಿಯಬೇಕಿದೆ: ಮಿಸ್ಬಾ- ಉಲ್ - ಹಕ್

ಐದು ಫೋರ್ ಹಾಗೂ ಎಂಟು ಸಿಕ್ಸರ್​ ಸಿಡಿಸಿದ ಅರ್ಜುನ್ ತೆಂಡೂಲ್ಕರ್ ಒಂದೇ ಓವರ್​ನಲ್ಲಿ ಐದು ಸಿಕ್ಸರ್​ ಸಿಡಿಸಿ, ಐಪಿಎಲ್​ ಪ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಸಯ್ಯದ್ ಮುಷ್ತಾಕ್​ ಅಲಿ ಹಿರಿಯ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಂಡಿದ್ದ ಅರ್ಜುನ್ ತೆಂಡೂಲ್ಕರ್​​, ಫೆ. 18ರಂದು ನಡೆಯಲಿರುವ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ABOUT THE AUTHOR

...view details