ಮುಂಬೈ: ಭಾರತ ತಂಡದ ಮಹಿಳಾ ಕ್ರಿಕೆಟರ್ಗಳು ಟಿ-20 ವಿಶ್ವಕಪ್ ಫೈನಲ್ ಸೋಲಿನ ನಂತರ ಲಾಕ್ಡೌನ್ಗೆ ವೇಳೆ ಲೂಡೊ ಆಟದ ಮೊರೆ ಹೋಗಿದ್ದಾರೆ.
ಕೊರೊನಾದಿಂದ ಎಲ್ಲಾ ಮಾದರಿಯ ಕ್ರಿಕೆಟ್ಗಳು ಸ್ಥಗಿತಗೊಂಡಿವೆ. ಇದರಿಂದ ಕ್ರಿಕೆಟಿಗರು ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಕೆಲವರು ಮನೆಯವರ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದರೆ, ಇನ್ನೂ ಕೆಲವರು ಆನ್ಲೈನ್ ಆಟಗಳನ್ನು ಆಡುವ ಮೂಲಕ ಬೇಸರ ಕಳೆಯುತ್ತಿದ್ದಾರೆ.
ಇದರ ಜೊತೆಗೆ ಫಿಟ್ನೆಸ್ ಕಡೆಗೂ ಗಮನ ನೀಡಿರುವ ಸ್ಫೋಟಕ ಬ್ಯಾಟ್ಸ್‌ವುಮನ್ ಸ್ಮೃತಿ ಮಂದಾನ ಟ್ರೈನರ್ಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಅವರು ಸೂಚಿಸಿದ ವ್ಯಾಯಾಮಗಳನ್ನು ಚಾಚೂತಪ್ಪದೇ ಮಾಡುತ್ತೇನೆ ಎಂದರು.
ಇನ್ನು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಸಹೋದರನ ಜೊತೆ ಕೀಟಲೆ ಮಾಡುವುದು, ಅಮ್ಮನಿಗೆ ಅಡುಗೆಯಲ್ಲಿ ಸಹಾಯ ಮಾಡುವುದು ಹಾಗೂ ದಿನ 10 ಗಂಟೆಗೆ ಹೆಚ್ಚು ಸಮಯ ನಿದ್ದೆ ಮಾಡುವುದಾಗಿ ಅವರು ತಿಳಿಸಿದರು.