ಕರ್ನಾಟಕ

karnataka

ETV Bharat / sports

ಪಿಂಕ್​ಬಾಲ್‌ನಿಂದ​ ಟೆಸ್ಟ್ ಕ್ರಿಕೆಟ್​​ ವೈಭವ ಮತ್ತೆ ಮರುಕಳಿಸುತ್ತೆ.. ದ್ರಾವಿಡ್​ ವಿಶ್ವಾಸ - ಈಡನ್​ ಗಾರ್ಡನ್​ನಲ್ಲಿ ಐತಿಹಾಸಿಕ ಟೆಸ್ಟ್​

ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ನಡೆಯುವ ಹಗಲು-ರಾತ್ರಿ ಟೆಸ್ಟ್​ ಪಂದ್ಯ ಖಂಡಿತ ಸಾವಿರಾರು ಕ್ರಿಕೆಟ್ ಅಭಿಮಾನಿಗಳನ್ನು ಮರಳಿ ಕ್ರೀಡಾಂಗಣಕ್ಕೆ ಕರೆತರಲಿದೆ ಎಂದು ದ್ರಾವಿಡ್​ ತಿಳಿಸಿದ್ದಾರೆ.

Pink Ball Test Get Crowds Back: Dravid

By

Published : Nov 19, 2019, 5:59 PM IST

ಸಿಂಗಾಪುರ್​: ಭಾರತ ತಂಡದ ಆಟಗಾರನಾಗಿ, ನಾಯಕನಾಗಿ ಕೋಚ್​ ಆಗಿ ಇದೀಗ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡಿಗ ರಾಹುಲ್​ ದ್ರಾವಿಡ್​, ಅಹರ್ನಿಶಿ ಟೆಸ್ಟ್ ಪಂದ್ಯ ಖಂಡಿತಾ ಇಷ್ಟು ದಿನ ಕಳೆದುಕೊಂಡಿದ್ದ ಅಭಿಮಾನಿಗಳನ್ನು ಮತ್ತೆ ಮೈದಾನಕ್ಕೆ ಕರೆತರಲಿದೆ' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

​ಸಿಂಗಾಪುರ್​ ರಾಷ್ಟ್ರೀಯ ವಿಶ್ವವಿದ್ಯಾನಿಯಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ದ್ರಾವಿಡ್​, ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ನಡೆಯುವ ಹಗಲು ರಾತ್ರಿ ಟೆಸ್ಟ್​ ಪಂದ್ಯ ಖಂಡಿತಾ ಸಾವಿರಾರು ಕ್ರಿಕೆಟ್ ಅಭಿಮಾನಿಗಳನ್ನು ಮರಳಿ ಕ್ರೀಡಾಂಗಣಕ್ಕೆ ಕರೆತರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2001ರಲ್ಲಿ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ಒಂದು ಲಕ್ಷಜನ ಸೇರುತ್ತಿದ್ದರು. ಅಂದು ಎಲ್ಲರ ಮನೆಯಲ್ಲಿ ಹೆಚ್​ಡಿ ಟಿವಿಗಳಿರಲಿಲ್ಲ, ಮೊಬೈಲ್​ನಲ್ಲೇ ಕ್ರಿಕೆಟ್​ ನೋಡುವ ಸೌಲಭ್ಯವಿರಲಿಲ್ಲ, ಏನೇ ನೋಡಬೇಕೆಂದರೂ ಮೈದಾನಕ್ಕೆ ಬರಲೇಬೇಕಿತ್ತು. ಆದರೆ, ಇಂದು ಕಾಲ ಬದಲಾಗಿ ಟೆಕ್ನಾಲಜಿಗಳಿಂದ ಜನರು ಮನೆಯಲ್ಲೇ ಕುಳಿತು ಕ್ರಿಕೆಟ್​ ವೀಕ್ಷಿಸಲು ಬಯಸುತ್ತಿದ್ದಾರೆ. ಟೆಸ್ಟ್​ ಕ್ರಿಕೆಟ್​ಗೂ ಜನರು ಕರೆತರುವ ಹಾಗೆ ಮಾಡಲು ಈ ಅಹರ್ನಿಶಿ ಟೆಸ್ಟ್​ ಪಂದ್ಯದಿಂದ ಸಾಧ್ಯವಿದೆ ಎಂದಿದ್ದಾರೆ.

ಅಹರ್ನಿಶಿ ಟೆಸ್ಟ್​ ಪಂದ್ಯದಲ್ಲಿ ಬಳಸುವ ಚೆಂಡಿನ ಮಾದರಿ..

ಆದರೆ, ಇದಕ್ಕೂ ಮುನ್ನ ಕೆಲವು ಬದಲಾವಣೆಗಳು ಅಗತ್ಯವಾಗಿದೆ. ಆ್ಯಶಸ್​ ಟೆಸ್ಟ್​ ಪಂದ್ಯದ ವೇಳೆ ಮೈದಾನ ತುಂಬಿರುತ್ತದೆ. ಏಕೆಂದರೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ನಲ್ಲಿ ಉತ್ತಮ ಆರೋಗ್ಯಕರ ಕ್ರೀಡಾಂಗಣದ ವ್ಯವಸ್ಥೆಯಿದೆ. ಅಂತಹ ಜನಸಂದಣಿಯನ್ನು ನಾವು ನಮ್ಮ ದೇಶದಲ್ಲಿ ಕಾಣಬೇಕಾದರೆ ಉತ್ತಮ ಸ್ಟೇಡಿಯಂ ವ್ಯವಸ್ಥೆಯನ್ನು ಮಾಡಿಕೊಡಬೇಕಿದೆ. ಮೊದಲಾಗಿ ಶೌಚಾಲಯ, ಸೀಟ್​​ ವ್ಯವಸ್ಥೆ ಹಾಗೂ ಕಾರ್​ ಪಾರ್ಕಿಂಗ್​ ನಿರ್ಮಾಣ ಮಾಡುವುದರ ಕಡೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ದ್ರಾವಿಡ್​ ಅಭಿಪ್ರಾಯಪಟ್ಟಿದ್ದಾರೆ.

ಪಿಂಕ್​ ಬಾಲ್​ ಟೆಸ್ಟ್ ಬಗ್ಗೆ ಮಾತನಾಡಿದ ದ್ರಾವಿಡ್​," ಪಿಂಕ್​ ಬಾಲ್​ ಉತ್ತಮವಾಗಿದೆ. ಈಗಾಗಲೇ ಪೂಜಾರ ಹಾಗೂ ರಹಾನೆ ಎನ್​​ಸಿಎನಲ್ಲಿ ಅಭ್ಯಾಸ ಮಾಡಿದ್ದಾರೆ. 7:30ರ ನಂತರ ಹಿಮ ಬೀಳುವುದರಿಂದ ಡೇ ಅಂಡ್​ ನೈಟ್​ ಟೆಸ್ಟ್​ಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಪಂದ್ಯಕ್ಕೆ ಜನರನ್ನು ಸೇರಿಸುವುದರ ಕಡೆಗೆ ಹೆಚ್ಚು ಗಮನ ನೀಡಬೇಕಿದೆ" ಎಂದಿದ್ದಾರೆ.

ABOUT THE AUTHOR

...view details