ಕರ್ನಾಟಕ

karnataka

ETV Bharat / sports

ಪಾಕ್​​ ಕ್ರಿಕೆಟ್​​ ತಂಡ ನಿಷೇಧಿಸಿ, ಆಯ್ಕೆ ಸಮಿತಿ ವಜಾಗೊಳಿಸಿ: ಕೋರ್ಟ್​​ಗೆ ಅರ್ಜಿ ಸಲ್ಲಿಕೆ!

ಟೀಂ ಇಂಡಿಯಾ ವಿರುದ್ಧ ಪಾಕ್ ಹೀನಾಯ​ ಸೋಲು ಕಂಡಿದ್ದು, ಇದರಿಂದ ಕಂಗೆಟ್ಟಿರುವ ಅಲ್ಲಿನ ಕ್ರೀಡಾಭಿಮಾನಿಯೊಬ್ಬ ಕೋರ್ಟ್​ ಮೆಟ್ಟಿಲೇರಿದ್ದು, ಪಾಕ್​ ತಂಡವನ್ನು ನಿಷೇಧಿಸುವಂತೆ ಅರ್ಜಿ ಸಲ್ಲಿಸಿದ್ದಾನೆ.

ಪಾಕಿಸ್ತಾನ ತಂಡ

By

Published : Jun 18, 2019, 11:44 PM IST

ಲಾಹೋರ್​​:ಟೀಂ ಇಂಡಿಯಾ ವಿರುದ್ಧ ಪಾಕ್​ ಹೀನಾಯ ಸೋಲು ಕಾಣುತ್ತಿದ್ದಂತೆ ಅಲ್ಲಿನ ಕ್ರೀಡಾಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಿನ ಕಟ್ಟಾ ಕ್ರಿಕೆಟ್‌ ಅಭಿಮಾನಿಗಳು ತಂಡದ ಆಟಗಾರರನ್ನು, ಆಯ್ಕೆ ಸಮಿತಿ, ಕೋಚ್‌ ಹೀಗೆ ಎಲ್ಲರನ್ನೂ ಮನಸೋ ಇಚ್ಚೆ ತರಾಟೆಗೆ ತೆಗೆದುಕೊಳ್ತಿದ್ದಾರೆ.

ಈ ಮಧ್ಯೆ ಪಾಕ್​ ತಂಡವನ್ನ ನಿಷೇಧಿಸಿ, ಆಯ್ಕೆ ಸಮಿತಿಯನ್ನ ವಜಾಗೊಳಿಸುವಂತೆ ಅಭಿಮಾನಿಯೊಬ್ಬ ಗುಜ್ರಾನ್ವಾಲಾ ಸಿವಿಲ್​ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದಾನೆ.

ಪಾಕ್​ ಕ್ರಿಕೆಟ್​ ತಂಡದ ಅಭಿಮಾನಿಯಾಗಿರುವ ಈತ ಪಂಜಾಬ್​ ಪ್ರಾಂತ್ಯದ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಅರ್ಜಿ ಮಾನ್ಯ ಮಾಡಿರುವ ಅಲ್ಲಿನ ನ್ಯಾಯಾಧೀಶರು​ ಪಾಕ್​ ಕ್ರಿಕೆಟ್​ ಬೋರ್ಡ್​ಗೆ ನೋಟಿಸ್​ ಜಾರಿ ಮಾಡಿದ್ದಾರೆ ಎನ್ನಲಾಗಿದೆ.ಅರ್ಜಿಯಲ್ಲಿ ತಂಡವನ್ನು ಬ್ಯಾನ್​ ಮಾಡಿ ಹಾಗೂ ಆಯ್ಕೆ ಸಮಿತಿಯನ್ನು ವಜಾಗೊಳಿಸುವುದಲ್ಲದೇ ತಂಡದ ಕೋಚ್​ ಮಿಕ್ಕಿ ಆರ್ಥರ್, ಬೌಲಿಂಗ್​ ಕೋಚ್​ ಹಾಗೂ ಮ್ಯಾನೇಜ್​ಮೆಂಟನ್ನು​​ ಬದಲಾವಣೆ ಮಾಡುವಂತೆ ಆಗ್ರಹಿಸಿದ್ದಾನೆ. ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿರುವ ಪ್ರಕಾರ, ಪಿಸಿಬಿ ನಾಳೆ ಸಭೆ ನಡೆಸಲು ನಿರ್ಧರಿಸಿದ್ದು, ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details