ದುಬೈ:ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಸ್ಥಾನಕ್ಕೆ ಡೆಲ್ಲಿ ಕ್ಯಾಪಿಟಲ್ ಸೇರಿದ್ದ ಪ್ರವೀಣ್ ದುಬೆ ಇಂದು ದುಬೈನಲ್ಲಿ ನಡೆಯುತ್ತಿರುವ ಐಪಿಎಲ್‌ನ 51 ಪಂದ್ಯದಲ್ಲಿ ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೆರಳು ಗಾಯಕ್ಕೆ ತುತ್ತಾಗಿ ಐಪಿಎಲ್ನಿಂದ ಅಮಿತ್ ಮಿಶ್ರಾರ ಸ್ಥಾನಕ್ಕೆ ಕಳೆದ ವಾರವಷ್ಟೇ ಪ್ರವೀಣ್ ದುಬೆ ಡೆಲ್ಲಿ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಕಳೆದ 3 ಪಂದ್ಯಗಳಿಂದ ಸತತ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಕನಸನ್ನು ಖಚಿತಗೊಳಿಸಿಕೊಳ್ಳುವ ಇರಾದೆಯಲ್ಲಿದ್ದು, ಇಂದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ ಬದಲು ದುಬೆಗೆ ಅವಕಾಶ ನೀಡಿದೆ.