ಕರ್ನಾಟಕ

karnataka

By

Published : Apr 29, 2020, 11:46 AM IST

Updated : Apr 29, 2020, 1:00 PM IST

ETV Bharat / sports

ಕೋವಿಡ್​ 19 ಹೋರಾಟಕ್ಕೆ ತ್ರಿಶತಕದ ಬ್ಯಾಟ್​, ಚಾಂಪಿಯನ್​ ಟ್ರೋಫಿಯಲ್ಲಿ ತೊಟ್ಟಿದ್ದ ಜರ್ಸಿ ಹರಾಜಿಗಿಟ್ಟ ಅಜರ್​ ಅಲಿ

2016ರಲ್ಲಿ ವೆಸ್ಟ್‌ ಇಂಡೀಸ್‌ ಯುಎಇನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲೊ ತ್ರಿಶತಕ(302) ಗಳಿಸಿದ ವೇಳೆ ಬಳಸಿದ್ದ ಬ್ಯಾಟ್‌ ಹಾಗೂ 2017ರ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಸಂದರ್ಭದಲ್ಲಿ ಧರಿಸಿದ್ದ ಜೆರ್ಸಿಯನ್ನು ಹರಾಜಿಗೆ ಇಟ್ಟಿದ್ದಾರೆ. ಇದರಿಂದ ಬರುವ ಸಂಪೂರ್ಣ ಹಣವನ್ನು ಕೋವಿಡ್​ 19ನಿಂದ ಸಂಕಷ್ಟಕ್ಕೊಳಗಾಗಿರುವ ಜನರಿಗೆ ದೇಣಿಗೆ ನೀಡಲು ಬಯಸಿದ್ದಾರೆ.

ಅಜರ್​ ಅಲಿ
ಅಜರ್​ ಅಲಿ

ಕರಾಚಿ:ಕೋವಿಡ್ ಸಂಕಷ್ಟಕ್ಕೀಡಾದವರಿಗೆ ನೆರವಾಗಲು ತಾವೂ ತ್ರಿಶಕತ ಸಿಡಿಸಿದ್ದ ದಿನ ಬಳಸಿದ್ದ ಬ್ಯಾಟ್​ ಹಾಗೂ ಚಾಂಪಿಯನ್ ಟ್ರೋಫಿ ಗೆದ್ದ ಸಂದರ್ಭದಲ್ಲಿ ಧರಿಸಿದ್ದ ಜರ್ಸಿಯನ್ನು ಹರಾಜಿಗಿಡಲು ಪಾಕಿಸ್ತಾನದ ಟೆಸ್ಟ್​ ತಂಡದ ನಾಯಕ ಅಜರ್​ ಅಲಿ ನಿರ್ಧರಿಸಿದ್ದಾರೆ.

2016ರಲ್ಲಿ ವೆಸ್ಟ್‌ ಇಂಡೀಸ್‌ ಯುಎಇನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲೊ ತ್ರಿಶತಕ(302) ಗಳಿಸಿದ ವೇಳೆ ಬಳಸಿದ್ದ ಬ್ಯಾಟ್‌ ಹಾಗೂ 2017ರ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಸಂದರ್ಭದಲ್ಲಿ ಧರಿಸಿದ್ದ ಜೆರ್ಸಿಯನ್ನು ಹರಾಜಿಗೆ ಇಟ್ಟಿದ್ದಾರೆ. ಇದರಿಂದ ಬರುವ ಸಂಪೂರ್ಣ ಹಣವನ್ನು ಕೋವಿಡ್​ 19ನಿಂದ ಸಂಕಷ್ಟಕ್ಕೊಳಗಾಗಿರುವ ಜನರಿಗೆ ದೇಣಿಗೆ ನೀಡಲು ಬಯಸಿದ್ದಾರೆ.

' ನಾನು ನನಗಿಷ್ಟವಾದ ಈ ಎರಡು ವಸ್ತುಗಳನ್ನು(ಬ್ಯಾಟ್‌ ಮತ್ತು ಜೆರ್ಸಿ ) ನನಗೆ ಅತ್ಯಂತ ಪ್ರಿಯವಾದ ವಸ್ತುಗಳನ್ನು 1ಮಿಲಿಯನ್​ ಪಾಕಿಸ್ತಾನ ರೂಪಾಯಿ ಮೂಲ ಬೆಲೆಗೆ ಹರಾಜಿಗಿಡುತ್ತಿದ್ದೇನೆ. ಇದರಿಂದ ಬರುವ ಹಣವನ್ನು ಕೋವಿಡ್‌ನಿಂದ ತೊಂದರೆಗೊಳಾದ ಜನರಿಗೆ ಸಹಾಯ ನೀಡಲು ಬಯಸಿದ್ದೆನೆ. ಮೇ 5ರವರೆಗೆ ಹರಾಜು ಅವಧಿ ಇದೆ' ಎಂದು ಅಲಿ ಟ್ವೀಟ್‌ ಮಾಡಿದ್ದಾರೆ.

ಅಜರ್​ ಅಲಿ ಹರಾಗಿಟ್ಟಿರುವ ಜೆರ್ಸಿಯ ಮೇಲೆ ಪಾಕಿಸ್ತಾನದ ಅಂದಿನ ಎಲ್ಲ ಆಟಗಾರರ ಆಟೋಗ್ರಾಫ್‌ ಇದೆ. 2016ರಲ್ಲಿ ವಿಂಡೀಸ್​ ವಿರುದ್ಧದ ಹಗುಲು ರಾತ್ರಿ ಟೆಸ್ಟ್​ ಪಂದ್ಯದ ಇತಿಹಾಸದಲ್ಲಿ ಮೊದಲ ತ್ರಿಶತಕ (ಅಜೇಯ 302) ಬಾರಿಸಿದ್ದ ಬ್ಯಾಟ್​ ಕೂಡ ವಿಶೇಷವಾಗಿದೆ.

Last Updated : Apr 29, 2020, 1:00 PM IST

ABOUT THE AUTHOR

...view details