ರಾವಲ್ಪಿಂಡಿ: ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಉಮರ್ ಗುಲ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಬಲೂಚಿಸ್ತಾನ್ ತಂಡ ರಾಷ್ಟ್ರೀಯ ಟಿ-20 ಕಪ್ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾದ ನಂತರ ಗುಲ್ ತಮ್ಮ 20 ವರ್ಷಗಳ ವೃತ್ತಿಪರ ಕ್ರಿಕೆಟ್ಗೆ ವಿದಾಯ ಹೇಳಿದ್ರು.

ಉಮರ್ ಗುಲ್ 125 ಪ್ರಥಮ ದರ್ಜೆ, 213 ಲಿಸ್ಟ್-ಎ ಮತ್ತು 167 ಟಿ-20 ಪಂದ್ಯಗಳನ್ನು ಆಡಿದ್ದು, ಒಟ್ಟು 987 ವಿಕೆಟ್ ಪಡೆದಿದ್ದಾರೆ. 47 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳಿಂದ 163 ವಿಕೆಟ್, 130 ಏಕದಿನ ಪಂದ್ಯಗಳಿಂದ 179 ವಿಕೆಟ್, 60 ಟಿ-20 ಪಂದ್ಯಗಳಿಂದ 85 ವಿಕೆಟ್ ಪಡೆದು ಮಿಂಚಿದ್ದಾರೆ.
"ಎರಡು ದಶಕಗಳಿಂದ ನನ್ನ ಕ್ಲಬ್, ನಗರ, ಪ್ರಾಂತ್ಯ ಮತ್ತು ದೇಶವನ್ನು ವಿವಿಧ ಹಂತಗಳಲ್ಲಿ ಪ್ರತಿನಿಧಿಸುತ್ತಿರುವುದು ಒಂದು ಗೌರವವಾಗಿದೆ. ಕಠಿಣ ಪರಿಶ್ರಮ, ಗೌರವ, ಬದ್ಧತೆ ಮತ್ತು ದೃಢ ನಿಶ್ಚಯದ ಮೌಲ್ಯಗಳನ್ನು ಕಲಿಸಿದ ನನ್ನ ಕ್ರಿಕೆಟ್ಅನ್ನು ನಾನು ಸಂಪೂರ್ಣವಾಗಿ ಆನಂದಿಸಿದ್ದೇನೆ. ಈ ಪ್ರಯಾಣದ ಸಮಯದಲ್ಲಿ ಕೆಲವು ರೀತಿಯಲ್ಲಿ ನನಗೆ ಸಹಾಯ ಮಾಡಿದ ಮತ್ತು ಬೆಂಬಲಿಸಿದ ಹಲವಾರು ಜನರನ್ನು ಭೇಟಿಯಾಗಲು ನನಗೆ ಸಂತೋಷವಾಗಿದೆ. ಆ ಎಲ್ಲಾ ಜನರಿಗೆ ಮತ್ತು ನನ್ನ ತಂಡದ ಆಟಗಾರರಿಗೆ ಮತ್ತು ಗೆಳೆಯರಿಗೆ ಅವರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯಲ್ಲಿ ಗುಲ್ ಹೇಳಿದ್ದಾರೆ.
2007ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಹಂತಕ್ಕೆ ತಲುಪಲು ಪ್ರಮುಖ ಕಾರಣರಾಗಿದ್ದ ಗುಲ್, ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಮಿಂಚಿದ್ರು. ಅಲ್ಲದೆ 2009ರಲ್ಲಿ ಪಾಕ್ ಟಿ-20 ವಿಶ್ವಕಪ್ ಜಯಿಸುವಲ್ಲಿ ಪ್ರಮುಖ ಕೊಡುಗೆ ನೀಡಿದ್ರು. ಟಿ-20 ಕ್ರಿಕೆಟ್ನಲ್ಲಿ ಬೆಸ್ಟ್ ಯಾರ್ಕರ್ ಸ್ಪೆಷಲಿಸ್ಟ್ ಎಂಬ ಕೀರ್ತಿ ಹೊಂದಿದ್ದರು.