ಕರ್ನಾಟಕ

karnataka

ETV Bharat / sports

34 ಬೌಂಡರಿ ಸಿಡಿಸಿ ವಿಲಿಯಮ್ಸನ್‌ ಭರ್ಜರಿ ದ್ವಿಶತಕ: ವಿಂಡೀಸ್‌ ವಿರುದ್ಧ ಕಿವೀಸ್‌ ಅಬ್ಬರ - ಕೇನ್ ವಿಲಿಯಮ್ಸನ್

ಟಾಸ್​ ಸೋತು ಬ್ಯಾಟಿಂಗ್​​ಗೆ ಇಳಿದ ಕಿವೀಸ್​ ಪಡೆ ಮೊದಲ ಇನ್ನಿಂಗ್ಸ್​ನಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ 519 ರನ್​ ದಾಖಲಿಸಿ ಡಿಕ್ಲೇರ್ಡ್ ಮಾಡಿಕೊಂಡಿದೆ.

ಕೇನ್ ವಿಲಿಯಮ್ಸನ್
Kane Williamson

By

Published : Dec 4, 2020, 12:23 PM IST

ಹ್ಯಾಮಿಲ್ಟನ್: ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸುವ ಮೂಲಕ ತಂಡ ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದಾರೆ.

ಟಾಸ್​ ಸೋತು ಬ್ಯಾಟಿಂಗ್​​ಗೆ ಇಳಿದ ಕಿವೀಸ್​ ಪಡೆ ಮೊದಲ ಇನ್ನಿಂಗ್ಸ್​ನಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ 519 ರನ್​ಗಳಿಸಿ ಡಿಕ್ಲೇರ್ಡ್ ಮಾಡಿಕೊಂಡಿತು. ಈ ಇನ್ನಿಂಗ್ಸ್​ನಲ್ಲಿ ಅಮೋಘ ಆಟವಾಡಿದ ಕೇನ್​ ವಿಲಿಯಮ್ಸನ್ 34 ಬೌಂಡರಿ ಹಾಗು ಎರಡು ಭರ್ಜರಿ ಸಿಕ್ಸರ್‌ ಬಾರಿಸಿದರು. ಈ ಮೂಲಕ 251 ರನ್​ ಗಳಿಸಿ ಬಳಿಕ ಔಟಾದರು. ಇದು ಟೆಸ್ಟ್​ ಕ್ರಿಕೆಟ್​ನಲ್ಲಿ ಕೇನ್‌ ಅವರ ವೈಯಕ್ತಿಕ ಅತ್ಯಧಿಕ ಸ್ಕೋರ್‌​ ಆಗಿದೆ. ಈ ದ್ವಿಶತಕ ಸಿಡಿಸುವ ಮೂಲಕ ವಿಲಿಯಮ್ಸ​ನ್​ ತಮ್ಮ ಮೂರನೇ ಡಬಲ್​ ಸೆಂಚುರಿ ಪೂರೈಸಿದರು. ಈ ಹಿಂದೆ 2019 ರಲ್ಲಿ ಹ್ಯಾಮಿಲ್ಟನ್‌ನಲ್ಲಿ ಅನರು ದ್ವಿಶತಕ ಸಿಡಿಸಿದ್ದರು.

ಕಿವೀಸ್​ ಪರ ಟಾಮ್ ಲಾಥಮ್ (86), ಜೇಮಿಸನ್ (51) ಅರ್ಧ ಶತಕ ಸಿಡಿಸಿ ಮಿಂಚಿದರು.

ABOUT THE AUTHOR

...view details