ಕ್ರೈಸ್ಟ್ಚರ್ಚ್ :ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯಲ್ಲಿ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಶ್ ಫಿಲಿಪ್ಪೆ ಅಗ್ರ ಮೂರು ಕ್ರಮಾಂಕದಲ್ಲಿ ಆಡಲಿದ್ದಾರೆ ಎಂದು ಆಸೀಸ್ ನಾಯಕ ಆ್ಯರೋನ್ ಫಿಂಚ್ ಖಚಿತಪಡಿಸಿದ್ದಾರೆ.
ಸತತ ಎರಡನೇ ಬಿಗ್ಬ್ಯಾಶ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದ ಸಿಡ್ನಿ ಸಿಕ್ಸರ್ಸ್ ಪರ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಅವರು 17 ಪಂದ್ಯಗಳಿಂದ 508 ರನ್ಗಳಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸಿದ 2ನೇ ಬ್ಯಾಟ್ಸ್ಮನ್ ಎನಿಸಿದ್ದರು. ಅವರು ಮುಂದಿನ ಟಿ20 ಸರಣಿಗಾಗಿ ಆಯ್ಕೆಯಾಗಿದ್ದು, ಅಗ್ರ 3 ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ ಎಂದು ಫಿಂಚ್ ತಿಳಿಸಿದ್ದಾರೆ.
ಟಾಪ್ 3ರಲ್ಲಿ ವೇಡ್, ಫಿಲಿಪ್ಪೆ ಮತ್ತು ನಾನು ಆಡಲಿದ್ದೇವೆ. ಮ್ಯಾಕ್ಸ್ವೆಲ್, ಸ್ಟೋಯ್ನಿಸ್ 4 ಮತ್ತು 5ರಲ್ಲಿ ಆಡಲಿದ್ದಾರೆ. ಜೋಶ್ ಫಿಲಿಪ್ಪೆ ಉತ್ತಮ ಪ್ರದರ್ಶನ ತೋರುತ್ತಿದ್ದು, ಅವರ ಆಟವನ್ನು ನೋಡುವುದು ಅದ್ಭುತ ಎಂದು ತಿಳಿಸಿದ್ದಾರೆ.
ಮ್ಯಾಥ್ಯೂ ವೇಡ್, ಮ್ಯಾಕ್ಸ್ವೆಲ್ ಜೊತೆಗೆ ಡೈನಾಮಿಕ್ ಬ್ಯಾಟ್ಸ್ಮನ್ ಎಂಬುದು ನಮಗೆ ಗೊತ್ತಿದೆ. ಹಾಗಾಗಿ, ಟಾಪ್ ಆರ್ಡರ್ನಲ್ಲಿ ನಾವು ಸುಲಭವಾಗಿ ಹೊಂದಿಕೊಳ್ಳಲಿದ್ದೇವೆ. ವೇಡ್ ಅಥವಾ ನಾನು ಅಥವಾ ಜೋಶ್ ಮೂವರಲ್ಲಿ ಯಾರೇ ಅಗ್ರ 3ರಲ್ಲಿ ಬ್ಯಾಟ್ ಮಾಡುತ್ತೀವಿ. ಇದು ನಮಗೆ ಅದ್ಭುತ ಅವಕಾಶವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ:ಮೂರನೇ ಬಾರಿಗೆ ಸಿಡ್ನಿ ಸಿಕ್ಸರ್ಸ್ಗೆ ಬಿಬಿಎಲ್ ಚಾಂಪಿಯನ್ ಪಟ್ಟ!