ಕರ್ನಾಟಕ

karnataka

ETV Bharat / sports

ಕ್ರಿಕೆಟ್​ನಿಂದಲೇ ವೃತ್ತಿ ಜೀವನ ರೂಪಿಸಿಕೊಳ್ಳಬೇಡಿ: ಮಕ್ಕಳಿಗೆ ಕಿವೀಸ್​​ ಆಲ್​ರೌಂಡರ್​  ಸಲಹೆ! - ಫೈನಲ್​

ಇಂಗ್ಲೆಂಡ್​ ವಿರುದ್ಧ ನ್ಯೂಜಿಲ್ಯಾಂಡ್​ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಸೋಲು ಕಾಣುತ್ತಿದ್ದಂತೆ ನಿರಾಸೆಗೊಂಡಿರುವ ಕಿವೀಸ್​ ಆಲ್​ರೌಂಡರ್​ ಮಕ್ಕಳಿಗೆ ಟ್ವೀಟ್​ ಮಾಡಿ ಕ್ರಿಕೆಟ್​ ವೃತ್ತಿ ಬದುಕಾಗಿ ಆಯ್ಕೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

ಜೆಮ್ಸ್​ ನಿಶಮ್

By

Published : Jul 15, 2019, 5:16 PM IST

ಲಾರ್ಡ್ಸ್​​:ಐಸಿಸಿ ಏಕದಿನ ವಿಶ್ವಕಪ್​​ನ ಫೈನಲ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ತಂಡ ವಿರೋಚಿತ ಸೋಲು ಕಂಡಿದ್ದು ಎಲ್ಲರಿಗೂ ತಿಳಿದ ವಿಚಾರ. ತಂಡ ಸೋಲು ಕಾಣುತ್ತಿದ್ದಂತೆ ನಿರಾಸೆಗೊಳಗಾಗಿರುವ ಕಿವೀಸ್ ತಂಡದ ಆಲ್​ರೌಂಡರ್​ ಟ್ವೀಟ್​ ಮಾಡಿ ಚಿಕ್ಕ ಮಕ್ಕಳಿಗೆ ಸಲಹೆ ನೀಡಿದ್ದಾರೆ.

ಮಕ್ಕಳೇ, ನಿಮ್ಮ ವೃತ್ತಿ ಬದುಕಿನ ದೃಷ್ಟಿಯಿಂದ ಯಿಂದ ಕ್ರಿಕೆಟ್​​ ಆಯ್ಕೆ ಮಾಡಿಕೊಳ್ಳಬೇಡಿ, ಅಡುಗೆ ಮಾಡುವುದು ಅಥವಾ ಬೇರೆ ಯಾವುದಾದರೂ ವೃತ್ತಿ ಆಯ್ಕೆ ಮಾಡಿಕೊಂಡು 60ನೇ ವಯಸ್ಸಿನಲ್ಲಿ ಸಾವನ್ನಪ್ಪುವುದು ಖುಷಿ ವಿಚಾರ. ಆದರೆ, ಕ್ರಿಕೆಟ್​ ವೃತ್ತಿ ಬದುಕಾಗಿ ಆಯ್ಕೆ ಮಾಡಿಕೊಳ್ಳಬೇಡಿ ಎಂದು ಟ್ವೀಟ್​ ಮಾಡಿದ್ದಾರೆ.

ನಿನ್ನೆ ಸೂಪರ್​ ಓವರ್​​ನಲ್ಲಿ ಇಂಗ್ಲೆಂಡ್​ ಗೆಲುವು ದಾಖಲು ಮಾಡುತ್ತಿದ್ದಂತೆ ನಿಶಮ್​ ಇಂಗ್ಲೆಂಡ್​ ತಂಡಕ್ಕೆ ಅಭಿನಂದನೆ ಸಲ್ಲಿಕೆ ಮಾಡಿ ಟ್ವೀಟ್​ ಮಾಡಿದ್ದರು. ಅದಾದ ಬಳಿಕ ಮತ್ತೊಂದು ಟ್ವೀಟ್​ ಮಾಡಿ ಈ ಅನಿಸಿಕೆ ಹಂಚಿಕೊಂಡಿದ್ದಾರೆ.

ABOUT THE AUTHOR

...view details