ಸಿಡ್ನಿ:ಆಸ್ಟ್ರೇಲಿಯಾ ತಂಡ ವಿರಾಟ್ ಕೊಹ್ಲಿಯೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಬಾರದು. ಅದರ ಬದಲು ಟೀಂ ಇಂಡಿಯಾ ನಾಯಕನ ವಿರುದ್ಧ ಸಮತೋಲಿತ ತಂತ್ರದ ವಿಧಾನ ಅಳವಡಿಸಿಕೊಳ್ಳಬೇಕು ಎಂದು ಆಸೀಸ್ ಸೀಮಿತ ಓವರ್‌ಗಳ ನಾಯಕ ಆ್ಯರೋನ್ ಫಿಂಚ್ ಎಚ್ಚರಿಕೆ ನೀಡಿದ್ದಾರೆ.
"ಒಬ್ಬ ವ್ಯಕ್ತಿಯಾಗಿ ಕೊಹ್ಲಿ ಮೈದಾನದಲ್ಲಿ ಹೆಚ್ಚು ಆರಾಮವಾಗಿ ಇರುತ್ತಾರೆ. ಇದರಿಂದ ಆಟದ ಗತಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ಅವರನ್ನು ಕೆಣಕುವ ಮೊದಲು ತಂಡದಲ್ಲಿ ಉತ್ತಮ ಸಮತೋಲನವಿದೆಯಾ? ಇಲ್ಲವೇ? ಎಂಬುದನ್ನು ನೋಡಬೇಕು. ಒಂದು ವೇಳೆ ಸಮತೋಲನ ಇಲ್ಲದಿದ್ದರೆ ಅವರು ಅಕ್ರಮಣಕಾರಿ ಆಗುತ್ತಾರೆ. ಒಂದು ಬಾರಿ ಅವರು ಸಿಡಿದು ನಿಂತರೆ ಎದುರಾಳಿಯ ಮೇಲೆ ಯಾವುದೇ ದಯೆ ತೋರುವುದಿಲ್ಲ" ಎಂದು ಸಲಹೆ ನೀಡಿದ್ದಾರೆ.