ನವದೆಹಲಿ:ಟೀಮ್ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್.ಧೋನಿ ನಿವೃತ್ತಿಯ ಬಗ್ಗೆ ಉಂಟಾಗಿರುವ ಗೊಂದಲಗಳ ಬಗ್ಗೆ ಮಾಹಿಯ ದೀರ್ಘಕಾಲದ ಸ್ನೇಹಿತ ಹಾಗೂ ಉದ್ಯಮ ಪಾಲುದಾರ ಅರುಣ್ ಪಾಂಡೆ ಸ್ಪಷ್ಟನೆ ನೀಡಿದ್ದಾರೆ.
ವಿಶ್ವಕಪ್ ಬಳಿಕ ಧೋನಿ ಏಕದಿನ ಕ್ರಿಕೆಟ್ನಿಂದ ಹಿಂದೆ ಸರಿಯಲಿದ್ದಾರೆ ಎನ್ನುವ ಮಾತುಗಳು ಟೂರ್ನಿ ಆರಂಭಕ್ಕೂ ಮುನ್ನ ಕೇಳಿಬಂದಿತ್ತು. ಟೀಮ್ ಇಂಡಿಯಾ ಸೆಮಿಫೈನಲ್ನಲ್ಲಿ ಸೋತ ಬಳಿಕ ಮಾಹಿಯ ನಿವೃತ್ತಿ ಬಗೆಗಿನ ಮಾತುಗಳು ಮತ್ತಷ್ಟು ಜೋರಾಗಿತ್ತು.
ಭವಿಷ್ಯದತ್ತ ದೃಷ್ಟಿ ಹರಿಸಿ, ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿ: ಧೋನಿಗೆ ಸಲಹೆ ನೀಡಿದ ಗಂಭೀರ್!
"ಧೋನಿ ತಕ್ಷಣಕ್ಕೆ ನಿವೃತ್ತಿ ಘೋಷಿಸುವ ಯೋಚನೆ ಹೊಂದಿಲ್ಲ. ಸದ್ಯ ಹಿರಿಯ ಆಟಗಾರನ ರಿಟೈರ್ಮೆಂಟ್ ಬಗ್ಗೆ ಹರಿದಾಡುತ್ತಿರುವ ಮಾತುಗಳು ಹಾಗೂ ಒತ್ತಡ ರೀತಿಯ ಸನ್ನಿವೇಶ ನಿಜಕ್ಕೂ ದುರದೃಷ್ಟಕರ" ಎಂದು ಅರುಣ್ ಪಾಂಡೆ ಹೇಳಿದ್ದಾರೆ.
ಧೋನಿ ನಡೆಸುತ್ತಿರುವ ರಿತಿ ಸ್ಪೋರ್ಟ್ಸ್ನಲ್ಲಿ ಅರುಣ್ ಪಾಂಡೆ ಪಾಲುದಾರಿಕೆಯನ್ನು ಹೊಂದಿದ್ದಾರೆ. ವ್ಯವಹಾರದ ಹೊರತಾಗಿ ಇವರಿಬ್ಬರೂ ದೀರ್ಘಕಾಲದ ಸ್ನೇಹಿತರು.
ವಿಂಡೀಸ್ ಪ್ರವಾಸಕ್ಕೆ ಭಾನುವಾರ ಟೀಮ್ ಇಂಡಿಯಾ ಆಯ್ಕೆ ನಡೆಯಲಿದ್ದು, ಇದಕ್ಕೂ ಮುನ್ನು ಬಿಸಿಸಿಐ ಅಧಿಕಾರಿಗಳು ಧೋನಿ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.