ಕರ್ನಾಟಕ

karnataka

ETV Bharat / sports

ಡೆತ್​ ಓವರ್​ಗಳಲ್ಲಿ ನನಗೇಕೆ ಅವಕಾಶವಿಲ್ಲ ಎಂದು ಕೇಳಿದ ಚಹಾರ್​ಗೆ ಧೋನಿ ಕೊಟ್ಟಿದ್ದು 2 ಪದಗಳ ಉತ್ತರ! - Deepak chahar about Dhoni

ನಾನು ರೈಸಿಂಗ್ ಪುಣೆ ಸೂಪರ್​ಜೇಂಟ್ಸ್​ ಮತ್ತು ಪ್ರಸ್ತುತ ಸಿಎಸ್​ಕೆ ತಂಡಲ್ಲೂ ನಾನು 140 ಕೆಪಿಎಚ್​ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದೇನೆ. ಆದರೂ ಧೋನಿ ಇದುವರೆಗೂ ನನಗೆ ಡೆತ್​ ಓವರ್​ಗಳಲ್ಲಿ ಬೌಲಿಂಗ್​ ಕೊಟ್ಟಿಲ್ಲ ಎಂದು ಆಕಾಶ್​ ಚೋಪ್ರಾ ಅವರ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಚೆನ್ನೈ ಸೂಪರ್  ಕಿಂಗ್ಸ್​
ದೀಪಕ್ ಚಹಾರ್​

By

Published : Sep 19, 2020, 5:52 PM IST

ನವದೆಹಲಿ:ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿ ಅದ್ದೂರಿ ಪ್ರದರ್ಶನ ತೋರಿ ಟೀಮ್​ ಇಂಡಿಯಾಗೆ ಎಂಟ್ರಿಕೊಟ್ಟಿರುವ ದೀಪಕ್​ ಚಹಾರ್​ ಯಶಸ್ಸಿನ ಹಿಂದೆ ಸಿಎಸ್​ಕೆ ನಾಯಕ ಧೋನಿ ಪಾತ್ರ ಮಹತ್ವದ್ದಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಆದರೆ ಪವರ್​ ಪ್ಲೇನಲ್ಲಿ ಎದುರಾಳಿಗಳನ್ನ ತನ್ನ ಬೌಲಿಂಗ್ ದಾಳಿಯಿಂದ ಬೆಚ್ಚಿ ಬೀಳಿಸುವ ದೀಪಕ್​ರನ್ನು ಐಪಿಎಲ್​ನ ಅತ್ಯುತ್ತಮ ವೇಗಿಯಾಗಿ ಬದಲಾಯಿಸಿದ ಧೋನಿ ಇದುವರೆಗೂ ಅವರಿಗೆ ಡೆತ್​ ಓವರ್​ಗಳಲ್ಲಿ ಅವಕಾಶ ನೀಡಿಲ್ಲ. ಇದರ ಬಗ್ಗೆ ಒಮ್ಮೆ ಧೋನಿಯನ್ನೇ ಕೇಳಿದ್ದಕ್ಕೆ ಅವರು ಎರಡು ಪದಗಳಲ್ಲಿ ಉತ್ತರಿಸಿ ಮಾತುಕತೆಯನ್ನು ನಿಲ್ಲಿಸಿದ್ದರು ಎಂದು ಸ್ವತಃ ಚಹಾರ್ ಹೇಳಿದ್ದಾರೆ.​

ನಾನು ರೈಸಿಂಗ್ ಪುಣೆ ಸೂಪರ್​ಜೇಂಟ್ಸ್​ ಮತ್ತು ಪ್ರಸ್ತುತ ಸಿಎಸ್​ಕೆ ತಂಡಲ್ಲೂ ನಾನು 140 ಕೆಪಿಎಚ್​ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದೇನೆ. ಆದರೂ ಧೋನಿ ಇದುವರೆಗೂ ನನಗೆ ಡೆತ್​ ಓವರ್​ಗಳಲ್ಲಿ ಬೌಲಿಂಗ್​ ಕೊಟ್ಟಿಲ್ಲ ಎಂದು ಆಕಾಶ್​ ಚೋಪ್ರಾ ಅವರ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಚಹಾರ್​ ಕಳೆದ ವರ್ಷ ಅದ್ಭುತವಾಗಿ ಸಿಎಸ್​ಕೆ ಫೈನಲ್​ಗೇರಲು ನೆರವಾಗಿದ್ದರು. ಸಿಎಸ್​ಕೆ ತಂಡದ ಪ್ರಮುಖ ವೇಗದ ಬೌಲರ್​ ಆಗಿದ್ದಾರೆ. ಆದರೆ ಧೋನಿ ಅವರ 4 ಓವರ್​ಗಳ ಕೋಟವನ್ನು ಮೊದಲಾರ್ಧದಲ್ಲಿ ಮುಗಿಸುತ್ತಿದ್ದಾರೆ. ಹೆಚ್ಚುವರಿ ವೇಗವನ್ನು ಹೊಂದಿದ್ದರೂ ಸಹಾ ಧೋನಿ ತಮ್ಮನ್ನು ಏಕೆ ಆರಂಭಿಕ ಓವರ್​ಗಳ ತಜ್ಞನಾಗಿ ಬಳಸುತ್ತಾರೆ ಎಂಬುದು ಆಗಾಗ್ಗೆ ಆಶ್ಚರ್ಯ ತರುತ್ತದೆ ಎಂದು ಹೇಳಿಕೊಂಡಿದ್ದಾರೆ.

ಇದರ ಬಗ್ಗೆ ಒಂದೆರಡು ಬಾರಿ ನಾನು ಕೋಚ್​ ಬಳಿ ಹೇಳಿದ್ದೆ. ಅವರೂ ಕೂಡ ನೀವು ಡೆತ್​ ಓವರ್​ಗಳಲ್ಲಿ ಬೌಲಿಂಗ್​ ಮಾಡಬಹುದು ಎಂದು ಹೇಳಿದರು. ಕೊನೆಗೆ ಧೈರ್ಯ ಮಾಡಿ ಮಾಹಿ ಭಾಯ್​ರನ್ನೇ ಕೇಳಿದೆ. ಅದಕ್ಕೆ ಅವರು "ನಾನು ಆಟಗಾರರನ್ನು ಬೆಳೆಸುತ್ತೇನೆ" ಎಂದು ಎರಡೇ ಪದಗಳಲ್ಲಿ ಮಾತುಕತೆಯನ್ನು ಮುಗಿಸಿದರು. ನಾನು ಬೇರೆ ಏನೂ ಮಾತನಾಡಲಿಲ್ಲ ಎಂದು ಚಹಾರ್​ ಹೇಳಿದ್ದಾರೆ.

ಧೋನಿ 15 ವರ್ಷಗಳ ವೃತ್ತಿ ಜೀವನದಲ್ಲಿ ಚಹಾರ್​ ಅಂತಹ ಸಾಕಷ್ಟು ಆಟಗಾರರನ್ನು ಬೆಳಕಿಗೆ ತಂದಿದ್ದಾರೆ. ಚಹಾರ್​ ಆರಂಭಿಕ ಓವರ್​ಗಳಲ್ಲಿ ಹೆಚ್ಚು ಪ್ರಭಾವ ಬೀರುತ್ತಿದ್ದಾರೆ. ಜೊತೆಗೆ ಸ್ವಿಂಗ್​ ಬೌಲಿಂಗ್​ನಿಂದ ಪವರ್​ ಪ್ಲೇನಲ್ಲೇ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಜೊತೆಗೆ ಡತ್​ ಓವರ್ ಸ್ಪೆಷಲಿಸ್ಟ್​ ಡ್ವೇನ್​ ಬ್ರಾವೋ ತಂಡದಲ್ಲಿರುವುದರಿಂದ ಧೋನಿ ಬೌಲಿಂಗ್ ಸಂಯೋಜನೆಯನ್ನು ಬದಲಾಯಿಸುತ್ತಿಲ್ಲ ಎಂಬುದು ಕ್ರಿಕೆಟ್​ ತಜ್ಞರ ಅಭಿಪ್ರಾಯವಾಗಿದೆ.

ABOUT THE AUTHOR

...view details