ಕರ್ನಾಟಕ

karnataka

By

Published : Mar 24, 2019, 10:17 PM IST

ETV Bharat / sports

ಆರು ಭಾಷೆಯಲ್ಲಿ ಧೋನಿ-ಝೀವಾ ಮಾತುಕತೆ... ನೆಟಿಜನ್ಸ್​ ಇಂಪ್ರೆಸ್ ಆದ ವಿಡಿಯೋ ಇಲ್ಲಿದೆ..!

ಧೋನಿ, ತಮಿಳು,ಬೆಂಗಾಲಿ,ಗುಜರಾತಿ,ಭೋಜ್​ಪುರಿ,ಪಂಜಾಬಿ ಹಾಗೂ ಉರ್ದುವಿನಲ್ಲಿ ಹೇಗಿದ್ದೀಯಾ ಎಂದು ಕೇಳಿದ್ದಾರೆ. ಇದಕ್ಕೆ ಝೀವಾ ಸಮರ್ಪಕವಾಗಿ ಉತ್ತರಿಸಿದ್ದಾಳೆ.

ಎಂ.ಎಸ್​.ಧೋನಿ

ಹೈದರಾಬಾದ್​: ಟೀಮ್ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್​.ಧೋನಿ ಬಿಡುವಿನ ವೇಳೆ ತಮ್ಮ ಮಗಳು ಝೀವಾ ಜೊತೆಗೆ ಸಖತ್​ ಎಂಜಾಯ್ ಮಾಡುತ್ತಾರೆ.

ಐಪಿಎಲ್​ನ ಮೊದಲ ಪಂದ್ಯದ ಭರ್ಜರಿ ಗೆಲುವಿನ ಬಳಿಕ ಧೋನಿ ತಮ್ಮ ಮಗಳ ಜೊತೆಗೆ ಕೆಲ ಕಾಲ ಸಮಯ ಕಳೆದಿದ್ದಾರೆ. ಧೋನಿ ತಮ್ಮ ಮಗಳೊಂದಿಗೆ ಆರು ವಿವಿಧ ಭಾಷೆಯಲ್ಲಿ ಮಾತನಾಡಿದ್ದು ಇದಕ್ಕೆ ಅದೇ ಭಾಷೆಯಲ್ಲಿ ಝೀವಾ ಉತ್ತರ ನೀಡಿದ್ದಾಳೆ.

ಧೋನಿ, ತಮಿಳು,ಬೆಂಗಾಲಿ,ಗುಜರಾತಿ,ಭೋಜ್​ಪುರಿ,ಪಂಜಾಬಿ ಹಾಗೂ ಉರ್ದುವಿನಲ್ಲಿ ಹೇಗಿದ್ದೀಯಾ ಎಂದು ಕೇಳಿದ್ದಾರೆ. ಇದಕ್ಕೆ ಝೀವಾ ಸಮರ್ಪಕವಾಗಿ ಉತ್ತರಿಸಿದ್ದಾಳೆ.

ಧೋನಿ ಹಾಗೂ ಮಗಳು ಝೀವಾಳ ಮಾತುಕತೆ ಈ ವಿಡಿಯೋವನ್ನು ಸ್ವತಃ ಧೋನಿ ತಮ್ಮ ಇನ್​​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ಮುದ್ದಾದ ಮಾತುಕತೆಗೆ ನೆಟಿಜನ್ಸ್​ ಫುಲ್​ ಫಿದಾ ಆಗಿದ್ದಾರೆ.

ABOUT THE AUTHOR

...view details