ಲಂಡನ್: ಭಾರತಕ್ಕೆ 2 ವಿಶ್ವಕಪ್ ಗೆಲ್ಲಿಸಿಕೊಟ್ಟ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ ಟೂರ್ನಿ ನಂತರ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಈ ವಿಶ್ವಕಪ್ನ ಭಾರತದ ಕೊನೆ ಪಂದ್ಯದಲ್ಲೇ ಧೋನಿ ವಿದಾಯ - ಟೀಂ ಇಂಡಿಯಾ
2019-07-03 14:15:11
ವಿಶ್ವಕಪ್ ಟೂರ್ನಿ ನಂತರ ನಿವೃತ್ತಿ ಘೋಷಣೆ
ಸದ್ಯ ಪ್ರಸಕ್ತ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿರುವ ಟೀಂ ಇಂಡಿಯಾ, ವಿಶ್ವಕಪ್ ಟೂರ್ನಿಯಲ್ಲಿ ಆಡುವ ಕೊನೆಯ ಪಂದ್ಯವೇ ಧೋನಿ ಅವರ ಕೊನೆಯ ಪಂದ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
ಇಂಗ್ಲೆಂಡ್ ಮತ್ತು ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದರಿಂದ ಆಕ್ರೋಶಗೊಂಡಿದ್ದ ಅಭಿಮಾನಿಗಳು ನಿವೃತ್ತಿ ತೆಗೆದುಕೊಳ್ಳುವಂತೆ ಟ್ವಿಟ್ಟರ್ನಲ್ಲಿ ಆಗ್ರಹಿಸಿದ್ದರು.
ಟೀಂ ಇಂಡಿಯಾ ಪರ 348 ಏಕದಿನ ಪಂದ್ಯಗಳನ್ನ ಆಡಿರುವ ಧೋನಿ, 10 ಶತಕ ಮತ್ತು 72 ಅರ್ಧಶತಕ ಗಳಿಸಿದ್ದು, ಒಟ್ಟು10,723 ರನ್ ಗಳಿಸಿದ್ದಾರೆ. 90 ಟೆಸ್ಟ್ ಪಂದ್ಯಗಳಿಂದ 1 ದ್ವಿಶತಕ, 6 ಶತಕ ಮತ್ತು 33 ಅರ್ಧ ಶತಕಗಳ ಸಹಾಯದಿಂದ 4,876 ರನ್ ಗಳಿಸಿದ್ದಾರೆ. ಇನ್ನು ಟಿ-20ಯಲ್ಲಿ 190 ಪಂದ್ಯಗಳಿಂದ ಒಟ್ಟು4,432 ರನ್ಗಳಿಸಿದ್ದಾರೆ.