ಕರ್ನಾಟಕ

karnataka

ETV Bharat / sports

ಐಪಿಎಲ್​ನಲ್ಲಿ ಕೀಪರ್​ಗಳು ನಾಯಕರಾಗುತ್ತಿರುವುದಕ್ಕೆ ಧೋನಿ ಕಾರಣ : ಜೋಸ್​ ಬಟ್ಲರ್​

ಸ್ವತಃ ವಿಕೆಟ್ ಕೀಪರ್ ಆಗಿರುವ ಬಟ್ಲರ್​, ವಿಕೆಟ್ ಹಿಂದುಗಡೆ ನಿಂತು ಪಂದ್ಯವನ್ನು 360 ಡಿಗ್ರಿಯಲ್ಲಿ ವೀಕ್ಷಿಸುವ ಲಾಭ ಪಡೆಯಬಹದೆಂದು ಹೇಳಿದ್ದಾರೆ. ನನ್ನ ಪ್ರಕಾರ ವಿಕೆಟ್ ಕೀಪರ್‌ಗಳು ಪಂದ್ಯದ ಅದ್ಭುತ ವೀಕ್ಷಣೆಯನ್ನು ಹೊಂದಿರುತ್ತಾರೆ. ವಿಕೆಟ್ ಹೇಗೆ ವರ್ತಿಸುತ್ತಿದೆ, ಬೌಲರ್‌ಗಳು ಹೇಗೆ ಬೌಲಿಂಗ್ ಮಾಡುವ ವಿಧಾನವನ್ನು ನೀವು ಮೊದಲು ನೋಡಬಹದು..

ಐಪಿಎಲ್​ನಲ್ಲಿ ಕೀಪರ್​ಗಳು ನಾಯಕರಾಗುತ್ತಿರುವುದಕ್ಕೆ ಧೋನಿ ಕಾರಣ
ಐಪಿಎಲ್​ನಲ್ಲಿ ಕೀಪರ್​ಗಳು ನಾಯಕರಾಗುತ್ತಿರುವುದಕ್ಕೆ ಧೋನಿ ಕಾರಣ

By

Published : Apr 11, 2021, 6:06 PM IST

ಮುಂಬೈ :ವಿಶ್ವದ ಬಹುದೊಡ್ಡ ಟಿ20 ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ಗಳು ನಾಯಕರಾಗಿ ಹೊರಹೊಮ್ಮಲು ಲೆಜೆಂಡರಿ ಮಹೇಂದ್ರ ಸಿಂಗ್ ಧೋನಿ ಸ್ಫೂರ್ತಿಯಾಗಿದ್ದಾರೆ ಎಂದು ಇಂಗ್ಲೆಂಡ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್​ ಓಪನರ್​ ಜೋಸ್​ ಬಟ್ಲರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಐಪಿಎಲ್-14ನೇ ಆವೃತ್ತಿಯಲ್ಲಿ ಎಂಟು ತಂಡಗಳ ಪೈಕಿ ನಾಲ್ಕು ತಂಡಗಳನ್ನು ವಿಕೆಟ್ ಕೀಪರ್​ ಬ್ಯಾಟ್ಸ್‌ಮನ್‌ಗಳು ನಾಯಕರಾಗಿದ್ದಾರೆ. ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾಯಕನಾದರೆ, ಪಂಜಾಬ್ ಕಿಂಗ್ಸ್ ತಂಡವನ್ನು ಕೆ ಎಲ್ ರಾಹುಲ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂತ್ ಮತ್ತು ರಾಜಸ್ಥಾನ ರಾಯಲ್ಸ್ ತಂಡವನ್ನು ಸಂಜು ಸ್ಯಾಮ್ಸನ್ ಮುನ್ನಡೆಸುತ್ತಿದ್ದಾರೆ.

"ನಾಯಕನಾಗಬಲ್ಲ ವಿಕೆಟ್ ಕೀಪರ್‌ಗಳ ಬೆಳವಣಿಗೆಯಲ್ಲಿ ಎಂ ಎಸ್​ ಧೋನಿಯವರ ಸಿಕ್ಸ್​ ಸೆನ್ಸ್​ ಜೊತೆಗೆ ಸಂಬಂಧವಿದೆ ಎಂಬುದರಲ್ಲಿ ನನಗೆ ಖಾತ್ರಿಯಿದೆ. ಅವರು(ಧೋನಿ) ನಿಸ್ಸಂಶಯವಾಗಿಯೂ ಒಬ್ಬ ಅದ್ಭುತ ನಾಯಕ ಮತ್ತು ಸಾಕಷ್ಟು ಆಟಗಾರರು ಅವರ ಹೆಜ್ಜೆಗಳನ್ನು ಹಿಂಬಾಲಿಸಲು ಬಯಸುತ್ತಾರೆ" ಎಂದು ಬಟ್ಲರ್ ತಿಳಿಸಿದ್ದಾರೆ.

ಸ್ವತಃ ವಿಕೆಟ್ ಕೀಪರ್ ಆಗಿರುವ ಬಟ್ಲರ್​, ವಿಕೆಟ್ ಹಿಂದುಗಡೆ ನಿಂತು ಪಂದ್ಯವನ್ನು 360 ಡಿಗ್ರಿಯಲ್ಲಿ ವೀಕ್ಷಿಸುವ ಲಾಭ ಪಡೆಯಬಹದೆಂದು ಹೇಳಿದ್ದಾರೆ. ನನ್ನ ಪ್ರಕಾರ ವಿಕೆಟ್ ಕೀಪರ್‌ಗಳು ಪಂದ್ಯದ ಅದ್ಭುತ ವೀಕ್ಷಣೆಯನ್ನು ಹೊಂದಿರುತ್ತಾರೆ. ವಿಕೆಟ್ ಹೇಗೆ ವರ್ತಿಸುತ್ತಿದೆ, ಬೌಲರ್‌ಗಳು ಹೇಗೆ ಬೌಲಿಂಗ್ ಮಾಡುವ ವಿಧಾನವನ್ನು ನೀವು ಮೊದಲು ನೋಡಬಹದು.

ಇದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನಿಮ್ಮ ಪಾತ್ರ ನಿರ್ಣಾಯಕವಾಗಿರುತ್ತದೆ ಎಂದಿರುವ ಅವರು, ಸಂಜು ಸ್ಯಾಮ್ಸನ್ ಅವರ ನಾಯಕತ್ವದಲ್ಲಿ ರಾಜಸ್ಥಾನ ರಾಯಲ್ಸ್ ಉತ್ತಮ ಪ್ರದರ್ಶನ ನೀಡುವ ಭರವಸೆಯಿದೆ ಎಂದಿದ್ದಾರೆ.

ಇದನ್ನು ಓದಿ :ನಾಯಕನಾಗಿ ಸಾಧಿಸಿದ ಮೊದಲ ಗೆಲುವಿನ ಶ್ರೇಯವನ್ನು ಧೋನಿಗೆ ಅರ್ಪಿಸಿದ ರಿಷಭ್ ಪಂತ್

ABOUT THE AUTHOR

...view details