ಅಬುದಾಬಿ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿದ್ದು, ಇದರಲ್ಲಿ ಭಾಗಿಯಾಗಲು ಈಗಾಗಲೇ ಎಲ್ಲ ತಂಡಗಳು ಯುಎಇನಲ್ಲಿವೆ. ಆದರೆ ಕೆಲವೊಂದು ತಂಡಳಿಗೆ ಆರಂಭಿಕ ಪಂದ್ಯಗಳಿಗೆ ವಿದೇಶಿ ಪ್ಲೇಯರ್ಸ್ ಅಲಭ್ಯತೆ ಕಾಡುತ್ತಿದ್ದು,ಕೆಕೆಆರ್ ತಂಡಕ್ಕೆ ಗುಡ್ನ್ಯೂಸ್ ಸಿಕ್ಕಿದೆ.
ಕೆಕೆಆರ್ ತಂಡಕ್ಕೆ ಗುಡ್ನ್ಯೂಸ್: ಆರಂಭಿಕ ಪಂದ್ಯಗಳಿಗೆ ಮಾರ್ಗನ್, ಕಮಿನ್ಸ್ ಲಭ್ಯ - ಪ್ಯಾಟ್ ಕಮಿನ್ಸ್
ಸೆಪ್ಟೆಂಬರ್ 19ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮೊದಲ ಪಂದ್ಯಗಳಿಗೆ ವಿದೇಶಿ ಪ್ಲೇಯರ್ಸ್ ಲಭ್ಯರಾಗಲಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಲೇಯರ್ಸ್ಗಳಾಗಿರುವ ಇಯಾನ್ ಮಾರ್ಗನ್ ಹಾಗೂ ಪ್ಯಾಟ್ ಕಮಿನ್ಸ್ ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಲಭ್ಯರಿದ್ದಾರೆ ಎಂದು ತಂಡದ ಸಿಇಒ ವೆಂಕಿ ಮೈಸೂರು ಸ್ಪಷ್ಟಪಡಿಸಿದ್ದಾರೆ.
ಬಿಸಿಸಿಐ ನಿಯಮದ ಪ್ರಕಾರ ಎಲ್ಲ ಪ್ಲೇಯರ್ಸ್ ಆರು ದಿನಗಳ ಕ್ವಾರಂಟೈನ್ಗೊಳಗಾಗಬೇಕಾಗಿದೆ. ಆದರೆ ಈಗಾಗಲೇ ಇಂಗ್ಲೆಂಡ್-ಆಸ್ಟ್ರೇಲಿಯಾ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದು, ಹೀಗಾಗಿ ನೇರವಾಗಿ ಅವರು ಪಂದ್ಯಗಳಲ್ಲಿ ಭಾಗಿಯಾಗಲಿದ್ದಾರೆ. ಕೆಕೆಆರ್ ಮೊದಲ ಪಂದ್ಯ ಸೆಪ್ಟೆಂಬರ್ 23ರಂದು ನಡೆಯಲಿದ್ದು, ಮಾರ್ಗನ್ ಹಾಗೂ ಕಮಿನ್ಸ್ ಸೆಪ್ಟೆಂಬರ್ 17ರಂದು ದುಬೈಗೆ ಆಗಮಿಸಿದ್ದಾರೆ.