ಕರ್ನಾಟಕ

karnataka

ETV Bharat / sports

ಸೋಲಿನ ಬೆನ್ನಲ್ಲೇ ಹೈದರಾಬಾದ್​ಗೆ ಮತ್ತೊಂದು ಆಘಾತ.. ಸ್ಟಾರ್​ ಆಲ್​ರೌಂಡರ್​ ಟೂರ್ನಿಯಿಂದ್ಲೇ ಔಟ್​!? - IPL UAE

ಆಲ್​ರೌಂಡರ್​ ಆಗಿರುವ ಅವರ ಸ್ಥಾನಕ್ಕೆ 2016ರಲ್ಲಿ ಕಪ್​ ಗೆಲ್ಲಲು ನೆರವಾಗಿದ್ದ ಬೆನ್​ ಕಟಿಂಗ್ ಅವರನ್ನು ಕರೆತರಬೇಕೆಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಕೆಲವರು ಇಂಗ್ಲೆಂಡ್​ನ ಡೇವಿಡ್​ ವಿಲ್ಲೀ ಹಾಗೂ ಆಸ್ಟ್ರೇಲಿಯಾದ ಹಿರಿಯ ಆಲ್​ರೌಂಡರ್ ಡೇನಿಯಲ್ ಕ್ರಿಶ್ಚಿಯನ್​ ಹೆಸರನ್ನು ಸೂಚಿಸುತ್ತಿದ್ದಾರೆ..

ಮಿಚೆಲ್ ಮಾರ್ಶ್​
ಮಿಚೆಲ್ ಮಾರ್ಶ್​

By

Published : Sep 22, 2020, 7:45 PM IST

ದುಬೈ :ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸೋಲುಂಡಿರುವ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ನಿನ್ನೆಯ ಪಂದ್ಯದ ವೇಳೆ ಹಿಮ್ಮಡಿ ಗಾಯಕ್ಕೆ ತುತ್ತಾಗಿರುವ ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಪ್ರಸಕ್ತ ಆವೃತ್ತಿಯಿಂದಲೇ ಹೊರ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸೋಮವಾರ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 5ನೇ ಓವರ್​ ಎಸೆಯಲು ಬಂದಿದ್ದ ಮಿಚೆಲ್​ ಮಾರ್ಶ್​ ಬೌಲಿಂಗ್ ವೇಳೆ ಪಿಚ್​ಮೇಲೆ ಜಾರಿ ಬಿದ್ದಿದ್ದರು. ಅವರು ಕೇವಲ 4 ಎಸೆತಗಳನ್ನಷ್ಟೇ ಎಸೆದಿದ್ದರು. ನಂತರ ಮೈದಾನದಿಂದ ಹೊರ ಹೋಗಿದ್ದ ಅವರು 10ನೇ ಬ್ಯಾಟ್ಸ್​ಮನ್​ ಆಗಿ ಬ್ಯಾಟಿಂಗ್‌ಗೆ ಮರಳಿದ್ರೂ ಯಾವುದೇ ರನ್​ಗಳಿಸಲಾಗದೆ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದರು. ಇದೀಗ ಟೂರ್ನಿಯಿಲ್ಲಿ ಮಾರ್ಷ್​ ಕಾಣಿಸಿಕೊಳ್ಳುವುದು ಅನುಮಾನ ಎಂದು ಪಿಟಿಐ ವರದಿ ಮಾಡಿದೆ.

"ಮಿಚೆಲ್ ಮಾರ್ಶ್​ ಅವರ ಗಾಯ ಗಂಭೀರವಾಗಿದೆ ಎಂದು ಕಾಣುತ್ತಿದೆ. ಅವರು ಯಾವುದೇ ಪಂದ್ಯವನ್ನು ಆಡಲಿದ್ದಾರೆ ಎಂಬುದರ ಬಗ್ಗೆ ನಮಗೆ ಖಾತ್ರಿಯಿಲ್ಲ" ಎಂದು ತಂಡದ ಮೂಲಗಳು ಪಿಟಿಐಗೆ ತಿಳಿಸಿವೆ. ಆಲ್​ರೌಂಡರ್​ ಆಗಿರುವ ಅವರ ಸ್ಥಾನಕ್ಕೆ 2016ರಲ್ಲಿ ಕಪ್​ ಗೆಲ್ಲಲು ನೆರವಾಗಿದ್ದ ಬೆನ್​ ಕಟಿಂಗ್ ಅವರನ್ನು ಕರೆತರಬೇಕೆಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಕೆಲವರು ಇಂಗ್ಲೆಂಡ್​ನ ಡೇವಿಡ್​ ವಿಲ್ಲೀ ಹಾಗೂ ಆಸ್ಟ್ರೇಲಿಯಾದ ಹಿರಿಯ ಆಲ್​ರೌಂಡರ್ ಡೇನಿಯಲ್ ಕ್ರಿಶ್ಚಿಯನ್​ ಹೆಸರನ್ನು ಸೂಚಿಸುತ್ತಿದ್ದಾರೆ.

ABOUT THE AUTHOR

...view details