ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ನ ಬಹುಮಾನದ ಮೊತ್ತವನ್ನು ಶೇ. 50ರಷ್ಟು ಕಡಿತಗೊಳಿಸಿರುವ ಬಿಸಿಸಿಐ ನಿರ್ಧಾರಕ್ಕೆ ತಂಡಗಳ ಮಾಲೀಕರು ಕಳವಳಗೊಂಡಿದ್ದು, ಬಿಸಿಸಿಐ ನಿರ್ಧಾರವನ್ನು ಪ್ರಶ್ನಿಸಿ ಪತ್ರ ಬರೆಯಲು ತೀರ್ಮಾನಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಬಿಸಿಸಿಐ ಎಂಟು ಫ್ರಾಂಚೈಸಿಗಳಿಗೆ ಕಳುಹಿಸಿದ ಮೇಲ್ ಪ್ರಕಾರ, 2020ರ ಐಪಿಎಲ್ ವಿಜೇತರಿಗೆ 10 ಕೋಟಿ ರೂ., ರನ್ನರ್ ಅಪ್ ತಂಡಕ್ಕೆ 6.25 ಕೋಟಿ ರೂ. ಮತ್ತು ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳು ತಲಾ 4.375 ಕೋಟಿ ರೂ. ಪಡೆಯಲಿವೆ.
ಇದೇ ವಿಚಾರವಾಗಿ ಮೊದಲು ದೆಹಲಿ ಕ್ಯಾಪಿಟಲ್ಸ್ ಚರ್ಚೆ ಪ್ರಾರಂಭಿಸಿದರೂ ಎಲ್ಲಾ ಎಂಟು ಫ್ರಾಂಚೈಸಿಗಳು ಇದಕ್ಕೆ ಒಪ್ಪಿದ್ದು, ಸುಮಾರು 48 ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ. ಎಲ್ಲಾ ತಂಡದ ಮಾಲೀಕರು ಒಪ್ಪಿಗೆ ಸೂಚಿಸಿದ ನಂತರ ಬಿಸಿಸಿಐಗೆ ಪತ್ರ ಬರೆಯಲು ನಿರ್ಧಾರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾಧ್ಯಮದಿಂದ ನಾವು ವಿಷಯಗಳನ್ನು ತಿಳಿದುಕೊಳ್ಳುವ ಸನ್ನಿವೇಶಕ್ಕೆ ಬಂದಿದ್ದೇವೆ. ಆಲ್-ಸ್ಟಾರ್ಸ್ ಗೇಮ್ ಆಯೋಜನೆ ಮಾಡುವ ವಿಷಯ ಕೂಡ ನಮಗೆ ತಿಳಿದಿರಲಿಲ್ಲ. ಇದು ಕಾರ್ಯನಿರ್ವಹಿಸುವ ವಿಧಾನವಲ್ಲ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಪತ್ರ ಕಳುಹಿಸಲಾಗಿದೆಯೇ ಎಂಬ ವಿಚಾರ ಕುರಿತು ಮಾಹಿತಿ ನೀಡಿದ್ದು, ಮುಂದಿನ 24 ಗಂಟೆ ಒಳಗಾಗಿ ಎಲ್ಲಾ ಎಂಟು ತಂಡಗಳ ಮಾಲೀಕರು ಸಹಿ ಮಾಡಿದ ಪತ್ರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ತಲುಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಐಪಿಎಲ್ ಬಹುಮಾನದ ಮೊತ್ತ 50ರಷ್ಟು ಕಡಿತ 'ಬಹುಮಾನದ ಹಣವನ್ನು ಕಡಿತಗೊಳಿಸುವುದಕ್ಕಾಗಿ ಆರ್ಥಿಕ ಕುಸಿತವನ್ನು ಬಿಸಿಸಿಐ ಉಲ್ಲೇಖಿಸಿದರೆ, ಫ್ರಾಂಚೈಸಿಗಳು ತಮ್ಮ ಕಾಳಜಿಯನ್ನು ಪರಿಶೀಲಿಸಲಾಗುವುದು. ಬಿಸಿಸಿಐ ಕೂಡ ನಮ್ಮ ಕಳವಳಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಮತ್ತು ತೆಗೆದುಕೊಂಡ ನಿರ್ಣಯವನ್ನು ಅವಲೋಕಿಸುತ್ತದೆ ಎಂಬ ವಿಶ್ವಾಸ ನಮಗಿದೆ. ಭಾರತೀಯ ಕ್ರಿಕೆಟ್‌ಗೆ ಯಾವುದು ಉತ್ತಮ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾವು ಯಾವಾಗಲೂ ಕೆಲಸ ಮಾಡಲು ನೋಡುತ್ತಿದ್ದೇವೆ. ಅವರ ಬೆಂಬಲವನ್ನೂ ನಾವು ನಿರೀಕ್ಷಿಸುತ್ತೇವೆ' ಎಂದು ಫ್ರಾಂಚೈಸಿಗಳ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಹಿಂದೆ 2019ರಲ್ಲಿ ವಿಜೇತರಿಗೆ 20 ಕೋಟಿ ರೂ., ರನ್ನರ್ ಅಪ್‌ಗೆ 12.5 ಕೋಟಿ ರೂ., ಮೂರನೇ ಮತ್ತು ನಾಲ್ಕನೇ ತಂಡಕ್ಕೆ ತಲಾ 8.75 ಕೋಟಿ ರೂ. ಬಹುಮಾನ ನೀಡಲಾಗುತ್ತಿತ್ತು.