ಕರ್ನಾಟಕ

karnataka

ETV Bharat / sports

ಐಪಿಎಲ್​​ನಲ್ಲಿ ಕನ್ನಡಿಗ ರಾಹುಲ್​ ಚೊಚ್ಚಲ ಶತಕ... ಮುಂಬೈ ಗೆಲುವಿಗೆ 198ರನ್​ ಟಾರ್ಗೆಟ್​! - ಮುಂಬೈ

ಕಳೆದ ವರ್ಷ ಮುಂಬೈ ಇಂಡಿಯನ್ಸ್​ ವಿರುದ್ಧ ಅಬ್ಬರಿಸಿ 94ರನ್​ಗಳಿಕೆ ವಿಕೆಟ್​ ಒಪ್ಪಿಸಿದ ಕೆಎಲ್​ ರಾಹುಲ್​ ಈ ಸಲ ಶತಕ ಸಿಡಿಸಿ ಮಿಂಚಿದ್ದಾರೆ.

ಕೆಎಲ್​ ರಾಹುಲ್​​

By

Published : Apr 10, 2019, 10:10 PM IST

ಮುಂಬೈ:ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮತ್ತೊಂದು ಶತಕ ಮೂಡಿ ಬಂದಿದೆ. ಕಿಂಗ್ಸ್​ ಇಲೆವೆನ್​ ಪಂಜಾಬ್​​ ತಂಡದ ಆರಂಭಿಕ ಹಾಗೂ ಕನ್ನಡಿಗ ಕೆಎಲ್​ ರಾಹುಲ್​ ಮುಂಬೈ ತಂಡದ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಪಂಜಾಬ್​ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಗೇಲ್​-ರಾಹುಲ್​ ಜೋಡಿ ಎದುರಾಳಿ ಬೌಲರ್​ಗಳನ್ನ ಸುಲಭವಾಗಿ ಎದುರಿಸಿದರು. ಹೀಗಾಗಿ ಮೊದಲ ವಿಕೆಟ್​ನಷ್ಟಕ್ಕೆ 12.5 ಓವರ್​ಗಳಲ್ಲೇ 116ರನ್​ಗಳಿಕೆ ಮಾಡಿತು. ಈ ವೇಳೆ 63ರನ್​ಗಳಿಕೆ ಮಾಡಿದ ಗೇಲ್​ ವಿಕೆಟ್​ ಒಪ್ಪಿಸಿದರು. ಇತ ಬ್ಯಾಟಿಂಗ್​ನಲ್ಲಿ ತಮ್ಮ ಅಬ್ಬರ ಮುಂದುರೆಸಿದ ರಾಹುಲ್​ ಕೇವಲ 64ಎಸೆತಗಳಲ್ಲಿ 6 ಸಿಕ್ಸರ್​ ಹಾಗೂ 6ಬೌಂಡರಿಗಳ ಸಹಾಯದಿಂದ ಅಜೇಯ 100ರನ್​ಗಳಿಕೆ ಮಾಡಿದರು. ಉಳಿದಂತೆ ಮಿಲ್ಲರ್​(7)ರನ್​, ಕರುಣ್​ ನಾಯರ್​(5)ರನ್​,ಕರ್ರನ್​(8)ರನ್​ ಹಾಗೂ ಮನ್ದೀಪ್​ ಸಿಂಗ್​ ಅಜೇಯ (7)ರನ್​ಗಳಿಕೆ ಮಾಡಿದರು. ತಂಡ ಕೊನೆಯದಾಗಿ ನಿಗದಿತ 20 ಓವರ್​ಗಳಲ್ಲಿ 4ವಿಕೆಟ್​ನಷ್ಟಕ್ಕೆ 197ರನ್​ಗಳಿಕೆ ಮಾಡಿದ್ದು, ಮುಂಬೈಗೆ 198ರನ್​ಗಳ ಗೆಲುವಿನ ಟಾರ್ಗೆಟ್​ ನೀಡಿದೆ.

ಕಳೆದ ವರ್ಷ 2018ರಲ್ಲಿ ಮುಂಬೈ ಇಂಡಿಯನ್ಸ್​ ತಂಡದ ವಿರುದ್ಧ ಕೆಎಲ್​ ರಾಹುಲ್​ 94ರನ್​ಗಳಿಕೆ ಮಾಡಿದ್ದರು.ಇನ್ನು ಮುಂಬೈ ಇಂಡಿಯನ್ಸ್​ ತಂಡದ ಆಲ್​ರೌಂಡರ್​ ತಾವು ಎಸೆದ 4ಓವರ್​ಗಳಲ್ಲಿ 2ವಿಕೆಟ್​ ಪಡೆದು ಬರೋಬ್ಬರಿ 57ರನ್​ ನೀಡಿ ದುಬಾರಿ ಎಣಿಸಿದರು. ಈ ಹಿಂದೆ 2017ರಲ್ಲಿ ಮಲಿಂಗಾ 4ಓವರ್​ಗಳಲ್ಲಿ 58ರನ್​ ನೀಡಿದ್ದರು.

ABOUT THE AUTHOR

...view details