ಡಾಕಾ :ಬಾಂಗ್ಲಾದೇಶದ ಟಿ20 ತಂಡದ ನಾಯಕ ಮಹಮದುಲ್ಲಾ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಹಾಗಾಗಿ ಇದೇ ತಿಂಗಳು ಪುನಾರಂಭಗೊಳ್ಳುತ್ತಿರುವ ಪಿಎಸ್ಎಲ್ನ ನಾಕ್ಔಟ್ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
34 ವರ್ಷದ ಆಲ್ರೌಂಡರ್ ಭಾನುವಾರ ಪಿಎಸ್ಎಲ್ಗಾಗಿ ದುಬೈ ಮೂಲಕ ಪಾಕಿಸ್ತಾನಕ್ಕೆ ಪ್ರಯಾಣ ಮಾಡಲು ಸಿದ್ಧರಾಗಿದ್ದರು. ಆದರೆ, ಕೋವಿಡ್ 19 ಸೋಂಕು ತಗುಲಿರುವುದರಿಂದ ಸೆಲ್ಫ್ ಐಸೊಲೇಸನ್ಗೆ ಒಳಗಾಗಿದ್ದಾರೆ.
ಇನ್ನು, ನವೆಂಬರ್ 21 ಅಥವಾ 22ರಂದು ಆರಂಭವಾಗಲಿರುವ ಬಂಗಬಂಧು ಟಿ20 ಕಪ್ಗೂ ಕೂಡ ಮಹಮದುಲ್ಲಾ ಗೈರಾಗುವ ಸಾಧ್ಯತೆಯಿದೆ ಎಂದು ಬಾಂಗ್ಲಾದೇಶದ ಮಾಧ್ಯಮಗಳು ವರದಿ ಮಾಡಿವೆ.
ಮೊಹಮದುಲ್ಲಾ ಮುಸಲ್ತಾನ್ ಸುಲ್ತಾನ್ ತಂಡಕ್ಕೆ ಮೊಯೀನ್ ಅಲಿ ಸ್ಥಾನಕ್ಕೆ ಸೇರಿಕೊಂಡಿದ್ದರು. ಆದರೆ, ಬಾಂಗ್ಲಾದೇಶ ಸರ್ಕಾರದ ನಿಯಮದ ಪ್ರಕಾರ ದೇಶದಿಂದ ಹೊರ ಹೋಗುವ ಪ್ರಯಾಣಿಕರು ಕೋವಿಡ್-19 ನೆಗೆಟಿವ್ ಸರ್ಟಿಫಿಕೇಟ್ ಸಲ್ಲಿಸಬೇಕು.
ಮಹಮದುಲ್ಲಾ ಮತ್ತು ತಮೀಮ್ ಇಕ್ಬಾಲ್ ಅವರನ್ನು ಪಿಎಸ್ಎಲ್ನ ವಿದೇಶಿ ಬದಲಿ ಆಟಗಾರರಾಗಿ ಕರೆ ಬಂದ ಹಿನ್ನೆಲೆ ಇಬ್ಬರು ಆಟಗಾರರು ಪಾಕಿಸ್ತಾನಕ್ಕೆ ಹೊರಡಲು ತಯಾರಾಗಿದ್ದರು. ತಮೀಮ್ ಇಕ್ಬಾಲ್ ಮಂಗಳವಾರ ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆಯಿದ್ದು, ಲಾಹೋರ್ ಕಲಂದರ್ಸ್ ತಂಡದ ಕ್ರಿಸ್ ಲಿನ್‌ಗೆ ಬದಲಿ ಆಟಗಾರರಾಗಿ ಆಡಲಿದ್ದಾರೆ.