ಹೈದರಾಬಾದ್: ಲಾರೆನ್ ಅಗೆನ್‌ಬ್ಯಾಗ್ ಎಂಬುವವರು ದಕ್ಷಿಣ ಆಫ್ರಿಕಾದ ಪುರುಷರ ಫ್ರಥಮ ದರ್ಜೆ ಕ್ರಿಕೆಟ್ ಟೂರ್ನಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸುವ ಮೂಲಕ ಪುರುಷರ ಕ್ರಿಕೆಟ್ ಟೂರ್ನಿಗೆ ತೀರ್ಪುಗಾರರಾಗಿ ಆಯ್ಕೆಯಾದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಈಕೆ ದಕ್ಷಿಣ ಆಫ್ರಿಕಾ ಪುರುಷರ ಕ್ರಿಕೆಟ್ನ ಮೊದಲ ಮಹಿಳಾ ಅಂಪೈರ್!
ದಕ್ಷಿಣ ಆಫ್ರಿಕಾ ಮೂಲದ ಮಹಿಳೆಯೊಬ್ಬರು ಪುರುಷರ ಕ್ರಿಕೆಟ್ ಪಂದ್ಯದಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಕಳೆದ ವಾರ ನಡೆದ ಸೆಂಟ್ರಲ್ ಗೌಟೆಂಗ್ ಲಯನ್ಸ್ ಮತ್ತು ಬೊಲೆಂಡ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಮೂಲಕ ಪುರುಷಕ ಕ್ರಿಕೆಟ್ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ ಮೊದಲ ಮಹಿಳಾ ಅಂಪೈರ್ ಆಗಿದ್ದಾರೆ.
ಕಳೆದ ತಿಂಗಳು ನಡೆದಿದ್ದ ಮಹಿಳಾ ಟಿ-20 ವಿಶ್ವಕಪ್ ಕ್ವಾಲಿಫೈರ್ ಟೂರ್ನಿಯಲ್ಲೂ ಲಾರೆನ್ ಅಗೆನ್‌ಬ್ಯಾಗ್ ಕಾರ್ಯ ನಿರ್ವಹಿಸಿದ್ದರು. ಮಹಿಳೆಯರಿಗಿದ್ದ ಹಲವಾರು ಅಡೆತಡೆಗಳನ್ನ ಮೀರಿ ಲಾರೆನ್ ಅಜೆನ್‌ಬ್ಯಾಗ್ ಬೆಳೆದಿದ್ದಾರೆ. ಈಕೆಯ ಸಾಧನೆ ಮುಂದಿನ ದಿನಗಳಲ್ಲಿ ಹಲವರಿಗೆ ಪ್ರೇರಣೆಯಾಗಲಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.