ಕರ್ನಾಟಕ

karnataka

ETV Bharat / sports

ರಾಹುಲ್​ರನ್ನು ಟೆಸ್ಟ್​ ತಂಡಕ್ಕೆ ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿದ ಮಂಜ್ರೇಕರ್​ಗೆ ತಿರುಗೇಟು ನೀಡಿ ಶ್ರೀಕಾಂತ್

ಮಂಜ್ರೇಕರ್​ ತಿರುಗೇಟು ನೀಡಿರುವ 2011 ರ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದ್ದ ಆಯ್ಕೆ ಸಮಿತಿ ಅಧ್ಯಕ್ಷ ಕ್ರಿಸ್ ಶ್ರೀಕಾಂತ್, ಸಂಜಯ್ ಮಂಜ್ರೇಕರ್​ರನ್ನು ಒಂಟಿಯಾಗಿ ಬಿಡಿ, ಆತನಿಗೆ ಟೀಕೆ ಮಾಡುವುದನ್ನು ಬಿಟ್ಟರೆ ಬೇರೆ ಯಾವುದೆ ಉದ್ಯೋಗವಿಲ್ಲ ಎಂದು ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿದ್ದಾರೆ.

ಕೆ.ಎಲ್ ರಾಹುಲ್
ಕೆ.ಎಲ್ ರಾಹುಲ್

By

Published : Oct 28, 2020, 5:54 PM IST

ಮುಂಬೈ: ಭಾರತ ಟೆಸ್ಟ್ ತಂಡಕ್ಕೆ ಕೆಎಲ್​ ರಾಹುಲ್​ರನ್ನು ಆಯ್ಕೆ ಮಾಡಿದ್ದಕ್ಕೆ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್​ಗೆ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಕೆ. ಶ್ರೀಕಾಂತ್ ತಿರುಗೇಟು ನೀಡಿದ್ದಾರೆ.

ಸೋಮವಾರ ಬಿಸಿಸಿಐ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಿತ್ತು. ಟೆಸ್ಟ್​ ತಂಡದಲ್ಲಿ ರಾಹುಲ್​ ಎರಡು ವರ್ಷಗಳ ನಂತರ ಮರಳಿದ್ದರು. ಆದರೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್​ ಐಪಿಎಲ್ ಪ್ರದರ್ಶನ ನೋಡಿ ಟೆಸ್ಟ್ ತಂಡಕ್ಕೆ ರಾಹುಲ್​ರನ್ನು ಆಯ್ಕೆ ಮಾಡಿದ್ದಕ್ಕೆ ಕಿಡಿಕಾರಿದ್ದರು.

"ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 7.1ರ ಸರಾಸರಿ, ಇಂಗ್ಲೆಂಡ್‌ ವಿರುದ್ಧದ 29ರ ಸರಾಸರಿ, ವೆಸ್ಟ್‌ಇಂಡಿಸ್‌ ವಿರುದ್ಧ 18ರ ಸರಾಸರಿ, ಆಸ್ಟ್ರೇಲಿಯಾ ವಿರುದ್ದ 10.7ರ ಸರಾಸರಿ, ವೆಸ್ಟ್‌ ಇಂಡಿಸ್‌ ವಿರುದ್ಧ 25.4ರ ಸರಾಸರಿಯಲ್ಲಿ ಕೆ.ಎಲ್‌ ರಾಹುಲ್‌ ಆಡಿದ್ದಾರೆ. ಆದರೂ ಐಪಿಎಲ್‌ ಮತ್ತು ವೈಟ್‌ಬಾಲ್‌ನಲ್ಲಿನ ಸಾಧನೆಯ ಆಧಾರದಲ್ಲಿ ಮರಳಿ ಟೆಸ್ಟ್‌ ತಂಡದಲ್ಲಿ ಸ್ಥಾನಪಡೆಯುವುದು ಅದೃಷ್ಟವೇ ಸರಿ. ಅವರು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆಂದು ನಾವು ಭಾವಿಸಬೇಕಷ್ಟೆ. ರಾಹುಲ್‌ಗೆ ಶುಭವಾಗಲಿ" ಎಂದು ಅವರು ವ್ಯಂಗ್ಯದ ಧಾಟಿಯಲ್ಲಿ ಟೀಕೆ ಮಾಡಿದ್ದರು.

ಆದರೆ ಈ ಟೀಕೆಗೆ ತಿರುಗೇಟು ನೀಡಿರುವ 2011 ರ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದ್ದ ಆಯ್ಕೆ ಸಮಿತಿ ಅಧ್ಯಕ್ಷ ಕ್ರಿಸ್ ಶ್ರೀಕಾಂತ್, ಸಂಜಯ್ ಮಂಜ್ರೇಕರ್​ರನ್ನು ಒಂಟಿಯಾಗಿ ಬಿಡಿ, ಆತನಿಗೆ ಟೀಕೆ ಮಾಡುವುದನ್ನು ಬಿಟ್ಟರೆ ಬೇರೆ ಯಾವುದೆ ಉದ್ಯೋಗವಿಲ್ಲ ಎಂದು ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿದ್ದಾರೆ.

ಟೆಸ್ಟ್​ನಲ್ಲಿ ಕೆಎಲ್​ ರಾಹುಲ್​ ಆಯ್ಕೆಯನ್ನು ಪ್ರಶ್ನಿಸುತ್ತಿದ್ದೀರಾ? ಆತ ಟೆಸ್ಟ್​ನಲ್ಲಿ ಅತ್ಯುತ್ತಮವಾಗಿ ಆಡಿದ್ದಾರೆ. ಸಂಜಯ್​ ಅದನ್ನು ಪ್ರಶ್ನಿಸಲು ಬಯಸಿದ್ದರೆ, ನಾನು ಅದನ್ನು ಒಪ್ಪುವುದಿಲ್ಲ. ವಿವಾದವನ್ನು ಸೃಷ್ಟಿಸಲು ನೀವು ಪ್ರಶ್ನಿಸಬಾರದು. ಕೆಎಲ್ ರಾಹುಲ್ ಎಲ್ಲಾ ಸ್ವರೂಪಗಳಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬೇಕಾದರೆ ಅವರ ಟೆಸ್ಟ್​ ದಾಖಲೆಯನ್ನು ನೋಡಬಹುದು ಎಂದು ತಿರುಗೇಟು ನೀಡಿದ್ದಾರೆ.

ಮಂಜ್ರೇಕರ್ ರಾಹುಲ್​ರ ಕೆಲವು ಸರಣಿಗಳಲ್ಲಿ ವೈಫಲ್ಯವನ್ನು ತೋರಿಸಿ ಟೀಕಿಸಿದ್ದಕ್ಕೆ ಉತ್ತರಿಸಿರುವ ಶ್ರೀಕಾಂತ್, ರಾಹುಲ್ ಅಸ್ಥಿರತೆ ಕಂಡಿರಬಹುದು, ಆದರೆ ಅವರು ಆಸ್ಟ್ರೇಲಿಯಾ ವಿರುದ್ಧ ಡೆಬ್ಯೂಟ್ ಸರಣಿಯಲ್ಲಿ ಶತಕ ಸಿಡಿಸಿದ್ದಾರೆ. ಮಂಜ್ರೇಕ್​ ಬಾಂಬೆ ಯನ್ನು ಬಿಟ್ಟು ಯೋಚಿಸಲು ಸಾಧ್ಯವಿಲ್ಲ. ಅದೇ ಅವರ ಸಮಸ್ಯೆ. ನಾವು ತಟಸ್ಥವಾಗಿ ಮಾತನಾಡುತ್ತಿದ್ದೇವೆ. ಆದ್ರೆ ಮಂಜ್ರೇಕರ್​ಗೆ ಎಲ್ಲವೂ ಬಾಂಬೆ ಮತ್ತು ಬಾಂಬೆ. ಅವರು ಬಾಂಬೆ ಮೀರಿ ಆಲೋಚಿಸಬೇಕಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ.

ABOUT THE AUTHOR

...view details