ಕರ್ನಾಟಕ

karnataka

ETV Bharat / sports

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ಸಿಸಿಬಿಯಿಂದ ಕ್ರಿಕೆಟಿಗ ಕೆ.ಸಿ.ಕಾರ್ಯಪ್ಪ ವಿಚಾರಣೆ - ಸಿಸಿಬಿಯಿಂದ ಕ್ರಿಕೆಟಿಗ ಕೆ.ಸಿ.ಕಾರ್ಯಪ್ಪ ವಿಚಾರಣೆ

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಕ್ರಿಕೆಟಿಗ ಕೆ.ಸಿ.ಕಾರ್ಯಪ್ಪ ಅವರನ್ನು ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.

ಕೆ.ಸಿ.ಕಾರ್ಯಪ್ಪ

By

Published : Nov 15, 2019, 7:09 PM IST

ಬೆಂಗಳೂರು:ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಜಾಲದಲ್ಲಿ ಐಪಿಎಲ್ ಆಟಗಾರ ಕೆ.ಸಿ. ಕಾರ್ಯಪ್ಪ ಅಲಿಯಾಸ್ ಕ್ಯಾರಿಯನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಕಾರ್ಯಪ್ಪ ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರನಾಗಿದ್ದು, ಕೆಪಿಎಲ್​ನಲ್ಲಿ ವಿಜಾಪುರ ಬುಲ್ಸ್ ಪರ ಆಡಿದ್ದರು. ಸದ್ಯ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಗುಮಾನಿ ಮೇರೆಗೆ‌ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಬಳ್ಳಾರಿ ಟಸ್ಕರ್ಸ್ ಆಟಗಾರನಾದ ಗೌತಮ್ ಅವರನ್ನು ಸಿಸಿಬಿ ಬಂಧಿಸಿತ್ತು. ವಿಚಾರಣೆ ವೇಳೆ ಗೌತಮ್ ಕೆಲ ಮಾಹಿತಿ ಬಿಚ್ಚಿಟ್ಟಿದ್ದು, ಈ ಮಾಹಿತಿ ಆಧರಿಸಿ ಕೆ.ಸಿ. ಕಾರ್ಯಪ್ಪ ಅವರನ್ನ ವಿಚಾರಣೆ ನಡೆಸುತ್ತಿದ್ದಾರೆ.

ಕೆ.ಸಿ. ಕಾರ್ಯಪ್ಪ 2015 ರ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಕ್ಕೆ ಬಿಕರಿಯಾಗಿದ್ದರು. 2016 ಹಾಗೂ 2017 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಟೀಂ ಸೇರಿದ್ದರು. 2019 ರಲ್ಲಿ ಕೋಲ್ಕತ್ತಾ ತಂಡ ಶಿವಂ ಬದಲಿಗೆ ಕಾರ್ಯಪ್ಪರನ್ನು ಕಣಕ್ಕಿಳಿಸಿತ್ತು. ಸದ್ಯ ಕೆಪಿಎಲ್ ಮ್ಯಾಚ್​ ಫಿಕ್ಸಿಂಗ್​ನಲ್ಲಿ ಭಾಗಿಯಾಗಿರುವ ಅನುಮಾನದ ಮೇರೆಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

ABOUT THE AUTHOR

...view details