ನವದೆಹಲಿ: ಕೊರೊನಾ ಲಾಕ್ಡೌನ್ನಿಂದ ಕ್ರಿಕೆಟ್ ಸ್ಥಗಿತಗೊಂಡಿರುವ ಕಾರಣ ಕ್ರಿಕೆಟಿಗರು ಸಮಯ ಕಳೆಯಲು ಸಾಮಾಜಿಕ ಮಾಧ್ಯಮದ ಮೊರೆ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವು ಸವಾಲುಗಳನ್ನು ಒಬ್ಬರಿಗೊಬ್ಬರು ನೀಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಜಿಮ್ನಲ್ಲಿ ತಲೆಕೆಳಗಾಗಿ ನೇತಾಡುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವರ್ಕೌಟ್ ನೋಡಿ ಭಾರತೀಯ ಅಭಿಮಾನಿಗಳು ಅಗರ್ವಾಲ್ ಅವರ ಕ್ಷಮತೆಗೆ ಫಿದಾ ಆಗಿದ್ದರು.