ಲಂಡನ್ : ವಿರಾಟ್ ಕೊಹ್ಲಿ ಪ್ರಸ್ತುತ ಭಾರತ ತಂಡದಲ್ಲಿ ಹೋರಾಟದ ಮನೋಭಾವನೆಯನ್ನು ಅಳವಡಿಸಿದ್ದಾರೆ. ಹಾಗಾಗಿ, ಭಾರತೀಯರನ್ನು ಮೈದಾನದ ಹೊರೆಗೆ ಅಥವಾ ಮೈದಾನದ ಒಳಗೆ ಎದುರಾಳಿಗಳು ಬೆದರಿಸಲು ಸಾಧ್ಯವಿಲ್ಲ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ತಂಡದ ಪ್ರಮುಖ ಆಟಗಾರರನ್ನು ಹಾಗೂ ಪಿತೃತ್ವ ರಜೆಯಿಂದ ತಂಡದಿಂದ ಹೊರ ಬಂದಿದ್ದ ನಾಯಕ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿಯೂ ಅನಾನುಭವಿ ಭಾರತ ತಂಡ, ಅಜಿಂಕ್ಯ ರಹಾನೆಯ ನೇತೃತ್ವದಲ್ಲಿ ಆಸೀಸ್ ನೆಲದಲ್ಲಿ ಧೈರ್ಯ ಮತ್ತು ದೃಢನಿಶ್ಚಯ ತೋರಿ ಅತಿಥೇಯ ತಂಡವನ್ನು 2-1ರಲ್ಲಿ ಮಣಿಸಿ ಟೆಸ್ಟ್ ಸರಣಿ ವಶಪಡಿಸಿಕೊಂಡಿತ್ತು.
ಹಾಗಾಗಿ, ಮುಂದಿನ ವಾರದಿಂದ ಭಾರತದ ವಿರುದ್ಧ ನಡೆಯುವ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಠಿಣ ಸ್ಪರ್ಧೆಗೆ ಸಿದ್ಧರಾಗಿ ಎಂದು ಇಂಗ್ಲೆಂಡ್ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಆಸ್ಟ್ರೇಲಿಯಾಕ್ಕೆ ಹೋಗಬಹುದಾದ ಯಾವುದೇ ತಂಡ, ಕೇವಲ 36ಕ್ಕೆ ಆಲೌಟ್ ಆಗಿ, ಸರಣಿಯಲ್ಲಿ 1-0ಯಲ್ಲಿ ಹಿನ್ನಡೆಯನ್ನು ಅನುಭವಿಸಿತು.