ಕರ್ನಾಟಕ

karnataka

ETV Bharat / sports

ಪಂಜಾಬ್ ತಂಡದ ಸಾರಥ್ಯ ಕನ್ನಡಿಗನ ಹೆಗಲಿಗೆ: ರಾಹುಲ್​ಗೆ ಒಲಿಯುತ್ತಾ ನಾಯಕನ ಪಟ್ಟ? - ಕೆ.ಎಲ್.ರಾಹುಲ್ ಲೇಟೆಸ್ಟ್ ನ್ಯೂಸ್

2020ರ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಾರಥ್ಯ ಕನ್ನಡಿಗನಿಗೆ ಒಲಿಯುವ ಸಾಧ್ಯತೆ ಇದೆ.

ರಾಹುಲ್ ಪಂಜಾಬ್ ತಂಡದ ನಾಯಕ, KL Rahul set to be named Kings XI Punjab captain
ಕೆ.ಎಲ್.ರಾಹುಲ್

By

Published : Dec 8, 2019, 7:53 PM IST

ಹೈದರಾಬಾದ್: ಮುಂಬರುವ 2020ರ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್​ ತಂಡದ ನಾಯಕನ ಪಟ್ಟ ಕೆ.ಎಲ್.ರಾಹುಲ್​ಗೆ ಒಲಿಯಲಿದೆ ಎಂದು ಹೇಳಲಾಗುತ್ತಿದೆ.

ಕಳೆದ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್​ ಪಂಜಾಬ್​ ತಂಡದ ಕ್ಯಾಪ್ಟನ್​ ಆಗಿದ್ದ ರವಿಚಂದ್ರನ್​ ಅಶ್ವಿನ್ ಈಗಾಗಲೇ ಡೆಲ್ಲಿ ಟ್ಯಾಪಿಟಲ್ಸ್ ತಂಡ ಸೇರಿಕೊಂಡಿದ್ದು ಪಂಜಾಬ್ ತಂಡದ ಮ್ಯಾನೇಜ್​ಮೆಂಟ್ ಹೊಸ ನಾಯಕನ ಹುಡುಕಾಟದಲ್ಲಿದೆ. ಮೂಲಗಳ ಪ್ರಕಾರ, ಕನ್ನಡಿಗ ಕೆ.ಎಲ್​.ರಾಹುಲ್​ಗೆ ತಂಡದ ಸಾರಥ್ಯ ವಹಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.

ಕೆ.ಎಲ್.ರಾಹುಲ್

ಇದೇ ಡಿಸೆಂಬರ್ 19ರಂದು ಕೋಲ್ಕತ್ತಾದಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಉಳಿದ ಆಟಗಾರರನ್ನು ಖರೀದಿಸಿದ ಬಳಿಕ ಅಧಿಕೃತವಾಗಿ ನಾಯಕ ಯಾರೆಂಬುದನ್ನು ಪಂಜಾಬ್ ತಂಡ ಘೋಷಣೆ ಮಾಡಲಿದೆ.

2018ರಲ್ಲಿ ಪಂಜಾಬ್ ತಂಡದ ಪರ 659 ರನ್​ ಗಳಿಸಿದ್ದ ರಾಹುಲ್, ಈ ವರ್ಷ 593ರನ್​ ಸಿಡಿಸಿದ್ದರು. ಕಿಂಗ್ಸ್ ಇಲೆವೆನ್ ಈಗಾಗಲೆ ಅನಿಲ್ ಕೊಂಬ್ಳೆ ಅವರನ್ನ ಕೋಚ್ ಆಗಿ ಆಯ್ಕೆ ಮಾಡಿದ್ದು, ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಜಾಂಟಿ ರೋಡ್ಸ್​ ಅವರನ್ನ ಫೀಲ್ಡಿಂಗ್ ಕೋಚ್ ಆಗಿ ಆಯ್ಕೆ ಮಾಡಿಕೊಂಡಿದೆ.

ABOUT THE AUTHOR

...view details