ಕರ್ನಾಟಕ

karnataka

ETV Bharat / sports

ದಿನೇಶ್ ಕಾರ್ತಿಕ್ ಆಡಿದ ಆ ಇನ್ನಿಂಗ್ಸ್​​​ ಭಾರತೀಯನೊಬ್ಬನ ಅತ್ಯುತ್ತಮ ಇನ್ನಿಂಗ್ಸ್: ಇರ್ಫಾನ್ ಪಠಾಣ್ - ಆರ್ ಪ್ರೇಮದಾಸ ಕ್ರೀಡಾಂಗಣ

ನಿಡಹಾಸ್ ಟ್ರೋಫಿ ಫೈನಲ್‌ನಲ್ಲಿ ದಿನೇಶ್ ಕಾರ್ತಿಕ್ 29 ರನ್ ಗಳಿಸಿ ಟೀಮ್​ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದರು. ಈ ಇನ್ನಿಂಗ್ಸ್​ ಭಾರತೀಯರು ಆಡಿದ ಅತ್ಯುತ್ತಮ ಇನ್ನಿಂಗ್ಸ್ ಎಂದು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಗುರುವಾರ ಹೇಳಿದ್ದಾರೆ.

Karthik
ದಿನೇಶ್ ಕಾರ್ತಿಕ್

By

Published : Mar 19, 2021, 11:01 AM IST

Updated : Mar 19, 2021, 10:46 PM IST

ನವದೆಹಲಿ: ಮಾರ್ಚ್ 18, 2018 ರಂದು, ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ನಿಡಹಾಸ್ ಟ್ರೋಫಿಯ ಫೈನಲ್‌ನಲ್ಲಿ ಟೀಮ್​ ಇಂಡಿಯಾ ನಾಲ್ಕು ವಿಕೆಟ್​ಗಳ ಭರ್ಜರಿ ಗೆಲವು ಪಡೆದಿತ್ತು. ಈ ಗೆಲುವಿಗೆ ಮುಖ್ಯ ಕಾರಣ ದಿನೇಶ್ ಕಾರ್ತಿಕ್ ಅವರ ಅಬ್ಬರದ ಬ್ಯಾಟಿಂಗ್​.

ನಿಡಹಾಸ್ ಟ್ರೋಫಿಯ ಫೈನಲ್‌ನಲ್ಲಿ ದಿನೇಶ್ ಕಾರ್ತಿಕ್ 29 ರನ್ ಗಳಿಸಿ ಟೀಮ್​ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದರು. ಈ ಇನ್ನಿಂಗ್ಸ್​ ಭಾರತೀಯರು ಆಡಿದ ಅತ್ಯುತ್ತಮ ಇನ್ನಿಂಗ್ಸ್ ಎಂದು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಗುರುವಾರ ಹೇಳಿದ್ದಾರೆ.

ದಿನೇಶ್ ಕಾರ್ತಿಕ್ ನಿಡಹಾಸ್ ಟ್ರೋಫಿಯ ಫೈನಲ್‌ ಪಂದ್ಯದ ವಿಡಿಯೋವೊಂದನ್ನು ತಮ್ಮ ಟ್ವೀಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದು, "ನೆನಪಿಡುವ ರಾತ್ರಿ" ಎಂದು ಬರೆದು ಪೋಸ್ಟ್​ ಮಾಡಿದ್ದಾರೆ. ಈ ಟ್ವೀಟ್‌ಗೆ ಇರ್ಫಾನ್ ಪಠಾಣ್ ರೀ ಟ್ವೀಟ್​ ಮಾಡಿದ್ದು ಇದು "ಒಬ್ಬ ಭಾರತೀಯನ ಅತ್ಯುತ್ತಮ ಇನ್ನಿಂಗ್ಸ್​" ಎಂದು ಬರೆದುಕೊಂಡಿದ್ದಾರೆ.

ನಿಡಹಾಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತ ಬಾಂಗ್ಲಾದೇಶವನ್ನು ನಾಲ್ಕು ವಿಕೆಟ್‌ಗಳಿಂದ ಮಣಿಸಿತ್ತು. ಪಂದ್ಯದ ಕೊನೆಯ ಎಸೆತದಲ್ಲಿ ಕಾರ್ತಿಕ್ ಅವರ ಫ್ಲಾಟ್-ಸಿಕ್ಸ್ ಬಾರಸಿ ಟೀಮ್​ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರಲ್ಲದೇ, ಒಂದೆ ರಾತ್ರಿಯಲ್ಲಿ ಹಿರೋ ಆಗಿದ್ದರು. ರೋಹಿತ್ ಶರ್ಮಾ ನೇತೃತ್ವದ ತಂಡ 2018ರ ನಿಡಹಾಸ್​​ ಟ್ರೋಫಿ ಎತ್ತಿ ಹಿಡಿದಿತ್ತು.

ಓದಿ : ಸೂರ್ಯಕುಮಾರ್ ಭರ್ಜರಿ ಬ್ಯಾಟಿಂಗ್​ : ಬೌಲರ್​ಗಳ ಸಂಘಟಿತ ದಾಳಿಗೆ ಸರಣಿ ಜೀವಂತ

Last Updated : Mar 19, 2021, 10:46 PM IST

ABOUT THE AUTHOR

...view details