ಕರಾಚಿ: ಸೆಪ್ಟೆಂಬರ್ನಲ್ಲಿ ಮುಂಬೈನ ಹೋಟೆಲ್ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಡೀನ್ ಜೋನ್ಸ್ಗೆ ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ಸ್ ಆಟಗಾರರು ಪಿಎಸ್ಎಲ್ ಪುನಾರಾರಂಭಕ್ಕೂ ಮುನ್ನ ಹೃದಯಸ್ಪರ್ಶಿ ಗೌರವ ಸಲ್ಲಿಸಿದ್ದಾರೆ.
13ನೇ ಆವೃತ್ತಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ನ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸಲು ಬಂದಿದ್ದ ಡೀನ್ ಜೋನ್ಸ್ ಸೆಪ್ಟೆಂಬರ್ನಲ್ಲಿ ಮುಂಬೈನ ಹೋಟೆಲ್ನಲ್ಲೇ ನಿಧರಾಗಿದ್ದರು.
ಪಿಎಸ್ಎಲ್ನ ಕರಾಚಿ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿದ್ದ ಡೀನ್ ಜೋನ್ಸ್ರಿಗೆ ನಾಕೌಟ್ ಪಂದ್ಯಕ್ಕೂ ಮುನ್ನ ಎರಡು ತಂಡಗಳ ಆಟಗಾರರು ಮೈದಾನದಲ್ಲಿ D ಅಕ್ಷರದಲ್ಲಿ ನಿಂತು "ಎಂದೆಂದಿಗೂ ನೀವು ನಮ್ಮ ಹೃದಯದಲ್ಲಿರುತ್ತೀರಾ, ಡೀನೋ" ಎಂದು ಗೌರವ ಸೂಚಿಸಿದ್ದಾರೆ. ಈ ವಿಡಿಯೋವನ್ನು ಪಾಕಿಸ್ತಾನ್ ಸೂಪರ್ ಲೀಗ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
2019ರಲ್ಲಿ ಇಸ್ಲಮಾಬಾದ್ ತಂಡದ ಕೋಚ್ ಆಗಿದ್ದ ಡೀನ್ ಜೋನ್ಸ್ ಸತತ 2 ಬಾರಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2019ರಲ್ಲಿ ಅವರನ್ನು ಕರಾಚಿ ಕಿಂಗ್ಸ್ ಮುಖ್ಯ ಕೋಚ್ ಆಗಿ ನೇಮಿಸಿತ್ತು. ಇದೀಗ ಅವರ ಅನುಪಸ್ಥಿತಿಯಲ್ಲಿ ಪಾಕ್ ಮಾಜಿ ವೇಗಿ ವಾಸೀಮ್ ಅಕ್ರಂ ಕೋಚ್ ಹುದ್ದೆಗೆ ನೇಮಕಗೊಂಡಿದ್ದಾರೆ.