ಮೌಂಟ್ ಮಾಂಗನುಯ್: ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಅನುಭವಿ ರಾಸ್ ಟೇಲರ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ನ್ಯೂಜಿಲ್ಯಾಂಡ್ ತಂಡ ಮೊದಲ 3 ವಿಕೆಟ್ ಕಳೆದುಕೊಂಡು 223 ರನ್ಗಳಿಸಿದೆ.
2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಯುವ ಬೌಲರ್ ಶಹೀನ್ ಅಫ್ರಿದಿ ಆತಿಥೇಯರಿಗೆ ಕೇವಲ 13 ರನ್ಗಳಾಗುವಷ್ಟರಲ್ಲಿ 2 ವಿಕೆಟ್ ಪಡೆದು ಆಘಾತ ನೀಡಿದರು. ಆರಂಭಿಕರಾದ ಟಾಮ್ ಲ್ಯಾಥಮ್ 4 ಹಾಗೂ ಟಾಮ್ ಬ್ಲಂಡೆಲ್ 5 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಆದರೆ ಮೂರನೇ ವಿಕೆಟ್ಗೆ ಜೊತೆಯಾದ ವಿಲಿಯಮ್ಸನ್ (94*) ಮತ್ತು ರಾಸ್ ಟೇಲರ್ (70) 120 ರನ್ಗಳ ಜೊತೆಯಾಟ ನೀಡಿದರು. ಟೇಲರ್ 151 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 70 ರನ್ಗಳಿಸಿ ಔಟಾದರು.