ಅಬುಧಾಬಿ: ಸನ್ರೈಸರ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಡೇವಿಡ್ ವಾರ್ನರ್ರನ್ನು ಬೌಲ್ಡ್ ಮಾಡುವ ಮೂಲಕ ಕಗಿಸೋ ರಬಾಡ ಡೆಲ್ಲಿ ಕ್ಯಾಪಿಟಲ್ಸ್ ಪರ ಮಹತ್ವದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.
ಡೆಲ್ಲಿ ಪರ 8 ವರ್ಷಗಳ ಹಿಂದಿನ ದಾಖಲೆ ಬ್ರೇಕ್ ಮಾಡಿದ ಕಗಿಸೋ ರಬಾಡ - ಡೆಲ್ಲಿ ಕ್ಯಾಪಿಟಲ್ಸ್
ರಬಾಡ 2020ರ ಐಪಿಎಲ್ನಲ್ಲಿ 16 ಪಂದ್ಯಗಳನ್ನಾಡಿದ್ದು 26 ವಿಕೆಟ್ ಪಡೆದಿದ್ದಾರೆ. ಹಿಂದಿನ ದಾಖಲೆ ಮಾರ್ನ್ ಮಾರ್ಕೆಲ್ ಅವರ ಹೆಸರಿನಲ್ಲಿತ್ತು. ಮಾರ್ಕೆಲ್ 2012ರಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ಪರ 25 ವಿಕೆಟ್ ಪಡೆದಿದ್ದದ್ದು ಡೆಲ್ಲಿ ಬೌಲರ್ನ ಉತ್ತಮ ಸಾಧನೆಯಾಗಿತ್ತು.
ನಿರ್ಣಾಯಕ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ರಬಾಡ ತಾವೆಸೆದ ಮೊದಲ ಓವರ್ನಲ್ಲಿ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ವಿಕೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್ ಆವೃತ್ತಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ರಬಾಡ 2020ರ ಐಪಿಎಲ್ನಲ್ಲಿ 16 ಪಂದ್ಯಗಳನ್ನಾಡಿದ್ದು 26 ವಿಕೆಟ್ ಪಡೆದಿದ್ದಾರೆ.
ಹಿಂದಿನ ದಾಖಲೆ ಮಾರ್ನ್ ಮಾರ್ಕೆಲ್ ಅವರ ಹೆಸರಿನಲ್ಲಿತ್ತು. ಮಾರ್ಕೆಲ್ 2012ರಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ಪರ 25 ವಿಕೆಟ್ ಪಡೆದಿದ್ದದ್ದು ಡೆಲ್ಲಿ ಬೌಲರ್ನ ಉತ್ತಮ ಸಾಧನೆಯಾಗಿತ್ತು. 3ನೇ ಸ್ಥಾನದಲ್ಲೂ ರಬಾಡ ಇದ್ದಾರೆ. 2019ರಲ್ಲಿ ರಬಾಡ 25 ವಿಕೆಟ್ ಪಡೆದಿದ್ದರು. 4ನೇ ಸ್ಥಾನದಲ್ಲಿ ಎನ್ರಿಚ್ ನೋಕಿಯಾ ಇದ್ದು, ಅವರು 20 ವಿಕೆಟ್ ಪಡೆದಿದ್ದಾರೆ. ವಿಶೇಷವೆಂದರೆ ಈ ಎಲ್ಲಾ ಬೌಲರ್ಗಳು ದಕ್ಷಿಣ ಆಫ್ರಿಕಾ ತಂಡದವರಾಗಿದ್ದಾರೆ.