ನವದೆಹಲಿ: ಈಸ್ಟರ್ನ್ ಲಡಾಖ್ನಲ್ಲಿ ನಡೆದ ಘರ್ಷಣೆಯಲ್ಲಿ ಭಾರತೀಯ ಯೋಧರು ಹುತಾತ್ಮರಾದ ಬೆನ್ನಲ್ಲೇ ಚೀನಿ ವಸ್ತುಗಳನ್ನು ನಿಷೇಧಿಸುವಂತೆ ದೇಶೆದೆಲ್ಲೆಡೆ ಕೂಗು ಕೇಳಿಬರುತ್ತಿದೆ. ಇದರ ಬೆನ್ನೆಲ್ಲೇ ಕೇಂದ್ರ ಸರ್ಕಾರ ಕೂಡ 59 ಚೀನಿ ಮೊಬೈಲ್ ಅಪ್ಲಿಕೇಷನ್ಗಳನ್ನು ನಿಷೇಧಿಸಿದೆ. ಇದೀಗ ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಚೀನಾದ ಪ್ರಾಯೋಜಕತ್ವವನ್ನು ಕೊನೆಗಾಣಿಸಬೇಕು ಎಂದು ಕಿಂಗ್ಸ್ ಇಲೆವೆನ್ ಪ್ರಾಂಚೈಸಿ ಮಾಲೀಕ ನೆಸ್ ವಾಡಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗಡಿ ಗಲಾಟೆ ನಂತರ ಚೀನಾ ಪ್ರಾಯೋಜಕತ್ವನ್ನು ಪರಿಶೀಲನೆ ನಡೆಸಲು ಐಪಿಎಲ್ ಆಡಳಿತ ಮಂಡಳಿ ಸಭೆ ಕರೆದಿತ್ತು. ಆದರೆ ಸಭೆ ನಡೆಯುವ ಮುನ್ನವೇ ಕೇಂದ್ರ ಸರ್ಕಾರ ಚೀನಾ ಮೂಲದ 59 ಮೊಬೈಲ್ ಅಪ್ಲಿಕೇಷನ್ಗಳನ್ನು ನಿಷೇಧಿಸಿದೆ. ಐಪಿಎಲ್ನ ಟೈಟಲ್ ಮಾಲೀಕತ್ವ ಹೊಂದಿರುವ ಚೀನಾ ಮೂಲದ ವಿವೋ ಮೊಬೈಲ್ ಕಂಪನಿ 5 ವರ್ಷದ ಒಪ್ಪಂದ ಮಾಡಿಕೊಂಡಿದ್ದು, 440 ಕೋಟಿ ರೂ.ಗಳನ್ನು ಬಿಸಿಸಿಐಗೆ ನೀಡುತ್ತಿದೆ. ಈ ಟೈಟಲ್ ಪ್ರಾಯೋಜಕತ್ವದ ಅವಧಿ 2022ಕ್ಕೆ ಕೊನೆಗೊಳ್ಳಲಿದೆ.