ಕರ್ನಾಟಕ

karnataka

ETV Bharat / sports

ಐಪಿಎಲ್​ನಲ್ಲಿ ಧೋನಿ ಮತ್ತೊಂದು ದಾಖಲೆ... ಎಬಿಡಿ, ರೈನಾ ರೆಕಾರ್ಡ್​ ಬ್ರೇಕ್​!

ಹೊಡಿ-ಬಡಿ ಆಟ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕ್ರಿಕೆಟರ್ಸ್​​ಗಳಿಂದ ಹೊಸ ಹೊಸ ದಾಖಲೆ ನಿರ್ಮಾಣಗೊಳ್ಳುತ್ತಿದ್ದು, ಸಿಎಸ್​ಕೆ ಕ್ಯಾಪ್ಟನ್​ ಧೋನಿ ಇದೀಗ ರೈನಾ,ಎಬಿಡಿ ವಿಲಿಯರ್ಸ್​ ರೆಕಾರ್ಡ್​ ಬ್ರೇಕ್​ ಮಾಡಿದ್ದಾರೆ.

ಎಂಎಸ್​ ಧೋನಿ

By

Published : Mar 27, 2019, 4:57 AM IST

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಹೊಡಿ-ಬಡಿ ಆಟ ಶುರುವಾಗಿದೆ. ಈ ಹಿಂದೆ ನಿರ್ಮಾಣಗೊಂಡಿರುವ ದಾಖಲೆ ಬ್ರೇಕ್​ ಆಗುತ್ತಿದ್ದು, ಕ್ರಿಕೆಟರ್ಸ್​​ ಹೊಸ ಹೊಸ ರೆಕಾರ್ಡ್​ ನಿರ್ಮಾಣ ಮಾಡುತ್ತಿದ್ದಾರೆ.

ಇದೀಗ ನಿನ್ನೆ ಡೆಲ್ಲಿ ಕ್ಯಾಪಿಟಲ್​ ತಂಡದ ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆ ತಂಡದ ಕ್ಯಾಪ್ಟನ್​ ಧೋನಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಧೋನಿ ಅಮಿತ್ ಮಿಶ್ರಾ ಬೌಲಿಂಗ್​​ನಲ್ಲಿ ಸಿಕ್ಸರ್​ ಸಿಡಿಸುವ ಮೂಲಕ ಈ ರೆಕಾರ್ಡ್​ ಬರೆದಿದ್ದು, ಎಬಿಡಿ ವಿಲಿಯರ್ಸ್​​,ಸುರೇಶ್​ ರೈನಾ ದಾಖಲೆ ಹಿಂದಿಕ್ಕಿದ್ದಾರೆ.

ಐಪಿಎಲ್​​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಭಾರಿಸಿದವರ ಪೈಕಿ ಇದೀಗ ಧೋನಿ 2ನೇ ಸ್ಥಾನದಲ್ಲಿದ್ದಾರೆ. ಒಟ್ಟು 187 ಸಿಕ್ಸರ್​ ಸಿಡಿಸಿರುವ ರೆಕಾರ್ಡ್ ಬರೆದಿರುವ ಧೋನಿ, 186 ಸಿಕ್ಸರ್​ ಸಿಡಿಸಿರುವ ಎಬಿಡಿ ಹಾಗೂ ರೈನಾ ಹಿಂದಿಕ್ಕಿದ್ದಾರೆ. ಇನ್ನು ಐಪಿಎಲ್​​ನಲ್ಲಿ ಅತಿ ಹೆಚ್ಚು 296ಸಿಕ್ಸರ್​ ಭಾರಿಸಿರುವ ದಾಖಲೆ ಗೇಲ್​​ ಹೆಸರಿನಲ್ಲಿದೆ. ಉಳಿದಂತೆ ರೋಹಿತ್​ ಶರ್ಮಾ 184,ವಿರಾಟ್​ ಕೊಹ್ಲಿ 178 ಹಾಗೂ ಡೇವಿಡ್​ ವಾರ್ನರ್​ 163 ಸಿಕ್ಸರ್​ ಬಾರಿಸಿದ್ದಾರೆ.

ಐಪಿಎಲ್​ನಲ್ಲಿ ಅತಿಹೆಚ್ಚು ಸಿಕ್ಸರ್​

  • ಕ್ರಿಸ್​ ಗೇಲ್​ 296 ಸಿಕ್ಸರ್​
  • ಎಂಎಸ್​ ಧೋನಿ 187 ಸಿಕ್ಸರ್​
  • ಎಬಿಡಿ/ರೈನಾ 186ಸಿಕ್ಸರ್​
  • ರೋಹಿತ್​ ಶರ್ಮಾ 184ಸಿಕ್ಸರ್​
  • ವಿರಾಟ್​ ಕೊಹ್ಲಿ 178ಸಿಕ್ಸರ್​
  • ವಾರ್ನರ್​​ 163ಸಿಕ್ಸರ್​​

ABOUT THE AUTHOR

...view details