ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಬರುವ ಏಪ್ರಿಲ್ 9ರಿಂದ ಆರಂಭಗೊಳ್ಳಲಿದ್ದು, ಈಗಾಗಲೇ ಎಲ್ಲ ತಂಡಗಳು ಕೊನೆ ಕ್ಷಣದ ತಯಾರಿಯಲ್ಲಿವೆ. ಇದರ ಮಧ್ಯೆ ಅನೇಕ ಪ್ಲೇಯರ್ಸ್ ಹೊಸ ತಂಡ ಸೇರಿಕೊಂಡಿದ್ದು, ಅವರಿಗೆ ಅದ್ಧೂರಿಯಾಗಿ ವೆಲ್ಕಮ್ ಮಾಡಿಕೊಳ್ಳಲಾಗಿದೆ.
ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಸೇರಿರುವ ಅನೇಕ ಪ್ಲೇಯರ್ಸ್ಗಳನ್ನ ತಂಡದ ಕ್ಯಾಪ್ಟನ್ ಧೋನಿ ವೆಲ್ಕಮ್ ಮಾಡಿಕೊಂಡಿದ್ದಾರೆ. ಸಿಎಸ್ಕೆ ಬಳಗಕ್ಕೆ ಹೊಸದಾಗಿ ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ಕೃಷ್ಣಪ್ಪ ಗೌತಮ್, ಚೇತೇಶ್ವರ್ ಪೂಜಾರಾ, ಹರಿ ನಿಶಾಂತ್, ಹರಿಶಂಕರ್ ರೆಡ್ಡಿ ಹಾಗೂ ಕೆ. ಭಗತ್ ವರ್ಮಾ ಸೇರಿಕೊಂಡಿದ್ದು, ಅವರನ್ನ ಧೋನಿ ತಂಡದ ಜರ್ಸಿ ನೀಡುವ ಮೂಲಕ ವೆಲ್ಕಮ್ ಮಾಡಿಕೊಂಡಿದ್ದಾರೆ. ಇದರ ಫೋಟೋ ಸಿಎಸ್ಕೆ ತನ್ನ ಟ್ವಿಟರ್ನಲ್ಲಿ ಶೇರ್ ಮಾಡಿದೆ.
ಇದನ್ನೂ ಓದಿ: ಸಾಮ್ಸನ್ ನಾಯಕತ್ವ, ಲೆಜೆಂಡರಿ ಸಂಗಾಕ್ಕರ ಮಾರ್ಗದರ್ಶನ: 2ನೇ ಕಪ್ ಮೇಲೆ ಕಣ್ಣಿಟ್ಟಿರುವ ರಾಜಸ್ಥಾನದ ಬಲಾಬಲ ಹೀಗಿದೆ
ಅತಿ ಹೆಚ್ಚಿನ ಹಣ ನೀಡಿ ಖರೀದಿ ಮಾಡಿರುವ ಅನ್ಕ್ಯಾಪ್ಡ್ ಪ್ಲೇಯರ್ ಕೆ. ಗೌತಮ್ಗೆ 9.25 ಕೋಟಿ ರೂ. ನೀಡಲಾಗಿದ್ದು, ಅವರ ಜರ್ಸಿ ನಂಬರ್ 79 ಆಗಿದೆ. ಚೇತೇಶ್ವರ್ ಪೂಜಾರಾಗೆ 25ರ ಜರ್ಸಿ ನಂಬರ್ ನೀಡಲಾಗಿದ್ದು, ರಾಬಿನ್ ಉತ್ತಪ್ಪ 77 ಜರ್ಸಿ ನಂಬರ್ನೊಂದಿಗೆ ಕಣಕ್ಕಿಳಿಯಲಿದ್ದಾರೆ.
ಏಪ್ರಿಲ್ 10ರಂದು ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ ಜತೆ ಮೊದಲ ಪಂದ್ಯ ಆಡುವುದರೊಂದಿಗೆ ಅಭಿಯಾನ ಆರಂಭ ಮಾಡಲಿದ್ದು, ಮುಂಬೈನ ವಾಖೆಂಡೆ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಉದ್ಘಾಟನಾ ಪಂದ್ಯ ಏಪ್ರಿಲ್ 9ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ಚೆನ್ನೈನಲ್ಲಿ ನಡೆಯಲಿದೆ.