ಚೆನ್ನೈ: ನ್ಯೂಜಿಲ್ಯಾಂಡ್ ತಂಡದ ಆಲ್ರೌಂಡರ್ ಕೈಲ್ ಜೆಮೀಸನ್ಗೆ ಗುರುವಾರ ನಡೆದ ಮಿನಿ ಹರಾಜಿನಲ್ಲಿ ಬರೋಬ್ಬರಿ 15 ಕೋಟಿ ರೂ. ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿಸಿದೆ.
ಕೇವಲ 75 ಲಕ್ಷ ಮೂಲ ಬೆಲೆಯಿದ್ದ ಜೆಮೀಸನ್ರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಬೆಂಗಳೂರು ತಂಡಗಳು ಭಾರಿ ಪೈಪೋಟಿ ನಡೆಸಿದವು. ಆದರೆ, ಕೊನೆಯಲ್ಲಿ ಪ್ರಸ್ತುತ ಹರಾಜಿನಲ್ಲಿ 2ನೇ ಗರಿಷ್ಠ ಮೊತ್ತಕ್ಕೆ ಆರ್ಸಿಬಿ ಪಾಲಾದರು.
ಇದಕ್ಕೂ ಮೊದಲು ಅರ್ಸಿಬಿ, ಗ್ಲೇನ್ ಮ್ಯಾಕ್ಸ್ವೆಲ್ ಅವರನ್ನು 14.25 ಕೋಟಿ ರೂ. ನೀಡಿ ಖರೀದಿಸಿತ್ತು.
ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮೋರಿಸ್ 16.25 ಕೋಟಿಗೆ ಬಿಕರಿಯಾಗುವ ಮೂಲಕ ಐಪಿಎಲ್ ಇತಿಹಾಸದಲ್ಲಿ ದಾಖಲೆ ಬರೆದರು. ಈ ಹಿಂದೆ ಭಾರತ ತಂಡದ ಆಲ್ರೌಂಡರ್ ಯುವರಾಜ್ ಸಿಂಗ್ 16 ಕೋಟಿ ರೂ. ಪಡೆದಿದ್ದು ಗರಿಷ್ಠ ಬೆಲೆಯಾಗಿತ್ತು. ಇವರನ್ನು ಬಿಟ್ಟರೆ ಪಂಜಾಬ್ ತಂಡ ಆಸೀಸ್ ಯುವ ಬೌಲರ್ಗಳಾದ ಜೇ ರಿಚರ್ಡ್ಸನ್ ಮತ್ತು ರಿಲೇ ಮೆರಿಡಿತ್ರನ್ನು ಕ್ರಮವಾಗಿ 14 ಮತ್ತು 8 ಕೋಟಿ ರೂ. ನೀಡಿ ಖರೀದಿಸಿತು.
ಇದನ್ನು ಓದಿ:ಐಪಿಎಲ್ ಹರಾಜಿನಲ್ಲಿ ವಿದೇಶಿ ಪ್ಲೇಯರ್ಸ್ಗೆ ಬಂಪರ್... ಕೋಟಿ ಕೋಟಿ ರೂ.ಗೆ ಬಿಕರಿ!