ಕರ್ನಾಟಕ

karnataka

ETV Bharat / sports

ನಿರ್ಣಾಯಕ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಹೈದರಾಬಾದ್​

ಹೈದರಾಬಾದ್ ತಂಡ ನದೀಮ್ ಬದಲು ಖಲೀಲ್ ಅಹ್ಮದ್​ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಪಂಜಾಬ್ ತಂಡದಲ್ಲಿ ಮಯಾಂಕ್ ಅಗರ್​ವಾಲ್ ಹಾಗೂ ಜಿಮ್ಮಿ ನಿಶಾಮ್​ ಬದಲು ಮಂದೀಪ್ ಸಿಂಗ್ ಮತ್ತು ಜೋರ್ಡ್ ತಂಡ ಸೇರಿಕೊಂಡಿದ್ದಾರೆ.

ಪಂಜಾಬ್ ಮತ್ತು ಹೈದರಾಬಾದ್​
ಪಂಜಾಬ್ ಮತ್ತು ಹೈದರಾಬಾದ್​

By

Published : Oct 24, 2020, 7:12 PM IST

Updated : Oct 24, 2020, 7:27 PM IST

ದುಬೈ: ಪ್ಲೇ ಆಫ್ ಕನಸಿನಲ್ಲಿರುವ ಸನ್​ರೈಸರ್ಸ್ ಹೈದರಾಬಾದ್ ತಂಡದ ಕ್ಯಾಪ್ಟನ್​ ವಾರ್ನರ್​​ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದ್ದು, ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್​ ಮೈದಾನದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ಸೆಣಸಾಟ ನಡೆಸಲಿದೆ.

ಉಭಯ ತಂಡಗಳು ಇಲ್ಲಿಯವರೆಗೆ 10 ಪಂದ್ಯಗಳನ್ನು ಆಡಿದ್ದು, 4ರಲ್ಲಿ ಜಯ ಗಳಿಸಿದ್ರೆ 6 ಪಂದ್ಯಗಳಲ್ಲಿ ಸೋಲು ಕಂಡಿವೆ. ಹೈದರಾಬಾದ್ ಮತ್ತು ಪಂಜಾಬ್ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿದ್ದು, ನಾಕ್​ಔಟ್​ ಹಂತಕ್ಕೆ ಅರ್ಹತೆ ಪಡೆಯುವ ತವಕದಲ್ಲಿವೆ.​

ಐಪಿಎಲ್ ಟೂರ್ನಿಯಲ್ಲಿ ಉಭಯ ತಂಡಗಳು 15 ಬಾರಿ ಮುಖಾಮುಖಿಯಾಗಿದ್ದು, 11 ಪಂದ್ಯಗಳಲ್ಲಿ ಹೈದರಾಬಾದ್​ ಜಯದ ನಗೆ ಬೀರಿದ್ರೆ, 4 ಪಂದ್ಯಗಳಲ್ಲಿ ಪಂಜಾಬ್ ಗೆಲುವು ಸಾಧಿಸಿದೆ.

ಹೈದರಾಬಾದ್ ತಂಡ ನದೀಮ್ ಬದಲು ಖಲೀಲ್ ಅಹ್ಮದ್​ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಪಂಜಾಬ್ ತಂಡದಲ್ಲಿ ಮಯಾಂಕ್ ಅಗರ್​ವಾಲ್ ಹಾಗೂ ಜಿಮ್ಮಿ ನಿಶಾಮ್​ ಬದಲು ಮಂದೀಪ್ ಸಿಂಗ್ ಮತ್ತು ಜೋರ್ಡ್ ತಂಡ ಸೇರಿಕೊಂಡಿದ್ದಾರೆ.

Last Updated : Oct 24, 2020, 7:27 PM IST

ABOUT THE AUTHOR

...view details