ನವದೆಹಲಿ: ರಾಜಸ್ಥಾನ ರಾಯಲ್ಸ್ ತಂಡದ ಫೀಲ್ಡಿಂಗ್ ಕೋಚ್ ದಿಶಾಂತ್ ಯಗ್ನಿಕ್ಗೆ ಕೊರೊನಾ ತಗುಲಿದೆ.
ತಮಗೆ ಕೋವಿಡ್ ಪಾಸಿಟಿವ್ ಬಂದಿರುವ ವಿಚಾರವನ್ನು ಟ್ವಿಟರ್ ಮೂಲಕ ಬಹಿರಂಗಪಡಿಸಿರುವ ದಿಶಾಂತ್, ತಮ್ಮ ಜೊತೆ ಸಂಪರ್ಕದಲ್ಲಿದ್ದವರಿಗೂ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

"ನನಗೆ ಕೋವಿಡ್ ಟೆಸ್ಟ್ನಲ್ಲಿ ಪಾಸಿಟಿವ್ ವರದಿ ಬಂದಿದೆ. ದಯವಿಟ್ಟು ಕಳೆದ 10 ದಿನಗಳಲ್ಲಿ ನನ್ನ ಜೊತೆಯಲ್ಲಿ ಸಂಪರ್ಕಕ್ಕೊಳಗಾಗಿರುವ ಎಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿ. ಬಿಸಿಸಿಐ ಪ್ರೋಟೋಕಾಲ್ಗಳ ಪ್ರಕಾರ ನಾನು 14 ದಿನಗಳ ಕಾಲ ಕ್ವಾರಂಟೈನ್ನಲ್ಲಿರಲಿದ್ದೇನೆ. ಯುಎಇಗೆ ತೆರಳುವ ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿಕೊಳ್ಳಬೇಕಾದರೆ ನಾನು 2 ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಪಡೆಯಬೇಕಿದೆ. ನಿಮ್ಮ ಶುಭಾಶಯ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು" ಎಂದು ದಿಶಾಂತ್ ಟ್ವೀಟ್ ಮಾಡಿದ್ದಾರೆ.
ಪ್ರೋಟೋಕಾಲ್ಗಳ ಪ್ರಕಾರ ದಿಶಾಂತ್ ಯಗ್ನಿಕ್ 14 ದಿನಗಳ ಕಾಲ ಸ್ವಯಂ ಕ್ವಾರಂಟೈನಲ್ಲಿರಬೇಕು. ಮತ್ತು ಎರಡು ಕೋವಿಡ್ ಟೆಸ್ಟ್ಗಳಲ್ಲಿ ನೆಗೆಟಿವ್ ಫಲಿತಾಂಶ ಪಡೆದರೆ ಮಾತ್ರ ಅವರು ಯುಎಇಗೆ ತೆರಳಲು ಅರ್ಹರಾಗಲಿದ್ದಾರೆ.