ಕರ್ನಾಟಕ

karnataka

ETV Bharat / sports

ಪಡಿಕ್ಕಲ್​, ವಿಲಿಯರ್ಸ್​ ಅರ್ಧಶತಕದ ಬಲ: ಎಸ್​ಆರ್​ಹೆಚ್​ಗೆ 164 ರನ್​ಗಳ ಟಾರ್ಗೆಟ್​ ನೀಡಿದ ಆರ್​ಸಿಬಿ

ಐಪಿಎಲ್​ಗೆ ಇಂದೇ ಪದಾರ್ಪಣೆ ಮಾಡಿದ್ದ ದೇವದತ್ ಪಡಿಕ್ಕಲ್​ ಅನುಭವಿ ಆ್ಯರೋನ್ ಫಿಂಚ್​ ಜೊತೆಗೂಡಿ ಮೊದಲ ವಿಕೆಟ್​ಗೆ 90 ರನ್​ಗಳ ಜೊತೆಯಾಟ ನೀಡಿದರು.

ಪಡಿಕ್ಕಲ್​, ವಿಲಿಯರ್ಸ್​ ಅರ್ಧಶತಕ
ಪಡಿಕ್ಕಲ್​, ವಿಲಿಯರ್ಸ್​ ಅರ್ಧಶತಕ

By

Published : Sep 21, 2020, 9:31 PM IST

Updated : Sep 21, 2020, 9:41 PM IST

ದುಬೈ: ಹೈದರಾಬಾದ್​ ವಿರುದ್ಧ ಯುವ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್​ ಹಾಗೂ ಡಿ ವಿಲಿಯರ್ಸ್​ ಸಿಡಿಸಿದ ಅಬ್ಬರದ ಅರ್ಧಶತಕಗಳ ನೆರವಿನಿಂದ ಆರ್​ಸಿಬಿ ತಂಡ ಹೈದರಾಬಾದ್​ಗೆ 164 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.

ಐಪಿಎಲ್​ಗೆ ಇಂದೇ ಪದಾರ್ಪಣೆ ಮಾಡಿದ್ದ ದೇವದತ್ ಪಡಿಕ್ಕಲ್​ ಅನುಭವಿ ಆ್ಯರೋನ್ ಫಿಂಚ್​ ಜೊತೆಗೂಡಿ ಮೊದಲ ವಿಕೆಟ್​ಗೆ 90 ರನ್​ಗಳ ಜೊತೆಯಾಟ ನೀಡಿದರು. 42 ಎಸೆತಗಳನ್ನು ಎದರುಸಿದ ಪಡಿಕ್ಕಲ್​ 8 ಬೌಂಡರಿ ಸಹಿತ 56 ರನ್​ಗಳಿಸಿದರೆ, ಫಿಂಚ್​ 27 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 29 ರನ್​ಗಳಿಸಿ ಔಟಾದರು.

6 ತಿಂಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ಮೈದಾನಕ್ಕಿಳಿದಿದ್ದ ವಿರಾಟ್​ ಕೊಹ್ಲಿ ಕೇವಲ 13 ಎಸೆತಗಳಲ್ಲಿ 14 ರನ್​ಗಳಿಸಿ ಎನ್​ ನಟರಾಜನ್​ ಬೌಲಿಂಗ್​ನಲ್ಲಿ ರಶೀದ್​ ಖಾನ್​ಗೆ ಕ್ಯಾಚ್​ ನೀಡಿ ಔಟಾದರು.

ಆದರೆ ಎಬಿ ಡಿ ವಿಲಿಯರ್ಸ್​ ಕೊನೆಯ ಮೂರು ಓವರ್​ಗಳಲದಲಿ ಅಬ್ಬರ ಬ್ಯಾಟಿಂಗ್ ಪ್ರದರ್ಶನ ತೋರಿ ಅರ್ಧಶತಕ ಗಳಿಸಿ ಕೊನೆಯ ಓವರ್​ನಲ್ಲಿ ರನ್​ಔಟ್​ ಆದರು. ಅವರು 30 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 51 ರನ್​ಗಳಿಸಿ ರನ್​ಔಟ್​ ಆದರು. ದುಬೆ ಕೂಡ 7 ರನ್​ಗಳಿಸಿ ಕೊನೆಯ ಎಸೆತದಲ್ಲಿ ರನ್​ಔಟ್​ ಆದರು.

ಒಟ್ಟಾರೆ ಬೆಂಗಳೂರು ತಂಡ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 163 ರನ್​ಗಳಿಸಿತು.

ಸನ್​ರೈಸರ್ಸ್​ ಹೈದರಾಬಾದ್​ ಪರ ಎನ್ ನಟರಾಜನ್​ , ಅಭಿಷೇಕ್​ ಶರ್ಮಾ ಹಾಗೂ ವಿಜಯ್ ಶಂಕರ್​ ತಲಾ ಒಂದು ವಿಕೆಟ್ ಪಡೆದರು. ಭುವನೇಶ್ವರ್​ ಕುಮಾರ್​ ವಿಕೆಟ್​ ಪಡೆಯದಿದ್ದರೂ 4 ಓವರ್​ಗಳಲ್ಲಿ ಕೇವಲ 25 ರನ್​ ನೀಡಿ ಉತ್ತಮ ಎಕಾನಮಿ ಕಾಪಾಡಿಕೊಂಡರು. ​

Last Updated : Sep 21, 2020, 9:41 PM IST

ABOUT THE AUTHOR

...view details